Connect with us

    DAKSHINA KANNADA

    ಮಡಿಕೇರಿ : ಕೊಡಗಿನ ದೇವಾಲಯಗಳಿಗೆ ಕನ್ನ ಹಾಕುತ್ತಿದ್ದ ಮುಬಾರಕ್ ಪಾಷ ಅರೆಸ್ಟ್..!

    ಮಡಿಕೇರಿ : ಕೊಡಗಿನ ದೇವಾಲಯಗಳಿಗೆ ಕನ್ನ ಹಾಕಿ ಹುಂಡಿಯ  ಹಣ ಕದಿಯುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಕೊಡಗಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹಾಸನ ನಗರದ ತಣ್ಣಿರುಹಳ್ಳ-ವಿಜಯನಗರ ನಿವಾಸಿ ಮುಬಾರಕ್ ಪಾಷ (34)  ಬಂಧಿತ ಆರೋಪಿಯಾಗಿದ್ದಾನೆ.  ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನ, ಶನಿವಾರಸಂತೆ ಪಟ್ಟಣದ ಪೇಟೆ ರಾಮ ಮಂದಿರ ದೇವಸ್ಥಾನ ಮತ್ತು ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಸ್ಥಾನಗಳ ಹುಂಡಿಯ ಹಣವನ್ನು ಕಳ್ಳತನ ಮಾಡಿದ ಆರೋಪ ಈ ಪಾಷನ ಮೇಲಿದೆ. ಈತನ ವಿರುದ್ಧ ಶನಿವಾರವಾರಸಂತೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಿವಿಧ ದೇವಸ್ಥಾನಗಳ ಹುಂಡಿಯ ಹಣವನ್ನು ಕಳವು ಮಾಡಿದ ಪ್ರಕರಣ ದಾಖಲಾಗಿತ್ತು. ಡಿವೈಎಸ್‍ಪಿ ಗಂಗಾಧರಪ್ಪ ಆರ್.ವಿ, ಶನಿವಾರಸಂತೆ ಪೊಲೀಸ್ ಠಾಣೆಯ ಅಧಿಕಾರಿಗಳಾದ ರಾಜೇಶ್.ಕೆ, ಹೆಚ್.ಸಿ.ಗೋವಿಂದರಾಜು, ಚಂದ್ರ.ಹೆಚ್.ವೈ ಹಾಗೂ ಠಾಣೆಯ ಅಪರಾಧ ಪತ್ತೆ ದಳದ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಬಂಧಿತನಿಂದ ನಗದು ರೂ.30,777, ಕೃತ್ಯಕ್ಕೆ ಬಳಸಿದ್ದ ದ್ವಿ-ಚಕ್ರ ವಾಹನ ಮತ್ತು ಕಬ್ಬಿಣದ ರಾಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದೆ. ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡು ತನ್ನ ಚಾಳಿಯನ್ನು ಮುಂದುವರೆಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *