Connect with us

KARNATAKA

ಮಡಿಕೇರಿ : ವಿಪರೀತ ಸಾಲ ಬಾಧೆ ತಾಳಲಾರದೆ ದಂಪತಿ ಜೀವಾಂತ್ಯ, ಇಬ್ಬರು ಪುಟ್ಟ ಕಂದಮ್ಮಗಳು ಅನಾಥ..!

ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದ ದಂಪತಿ ಇಬ್ಬರು ಪುಟ್ಟ ಕಂದಮ್ಮಗಳನ್ನು ಅನಾಥ ಮಾಡಿ ಕೊಡಗಿನಲ್ಲಿ ಸಾವಿನ ಕದ ತಟ್ಟಿದ್ದಾರೆ. ಕೊಪ್ಪ ನಿವಾಸಿ ಸುರೇಶ್( 39) ಮತ್ತು ಪತ್ನಿ ಪಲ್ಲವಿ (28) ಮೃತ ದುರ್ದೈವಿಗಳಾಗಿದ್ದಾರೆ.

ಮಡಿಕೇರಿ : ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದ ದಂಪತಿ ಇಬ್ಬರು ಪುಟ್ಟ ಕಂದಮ್ಮಗಳನ್ನು ಅನಾಥ ಮಾಡಿ ಕೊಡಗಿನಲ್ಲಿ ಸಾವಿನ ಕದ ತಟ್ಟಿದ್ದಾರೆ. ಕೊಪ್ಪ ನಿವಾಸಿ ಸುರೇಶ್( 39) ಮತ್ತು ಪತ್ನಿ ಪಲ್ಲವಿ (28) ಮೃತ ದುರ್ದೈವಿಗಳಾಗಿದ್ದಾರೆ.

 

ಉದ್ಯಮದಲ್ಲಿ ನಷ್ಟ ಮತ್ತು ಸಾಲಗಾರರ ಕಿರುಕುಳ ಯಿಂದ ಬೇಸತ್ತು ದಂಪತಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಡಗಿನ ಕುಶಾಲನಗರ ಸಮೀಪದ ಕೊಪ್ಪದಲ್ಲಿ ಈ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದ ಸುರೇಶ್ ದಂಪತಿ ದೇವಸ್ಥಾನಕ್ಕೆ ಎಂದು ಮನೆಯಿಂದ ತೆರಳಿ ತಮ್ಮ ದೊಡ್ಡ ಹೊನ್ನೂರು ಕಾವಲ್ ಜಮೀನು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಮೃತದೇಹಗಳನ್ನು ಕುಶಾಲನಗರ ಸಮುದಾಯ ಅರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದೆ. ಮೃತರು ಇಬ್ಬರು ಪುಟ್ಟ ಕಂದಮ್ಮಗಳನ್ನು ಅಗಲಿದ್ದಾರೆ.ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ರಿಯಲ್ ಎಸ್ಟೇಟ್ ಮಾಫಿಯಾ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಮೃತ ಸುರೇಶ್ ಆತ್ಮಹತ್ಯೆಗೆ ಕಾರಣರಾದವರ ಹೆಸರನ್ನ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಈ ಸಂಬಂಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ‌12 ಮಂದಿ ವಿರುದ್ಧ ಕರಣ ದಾಖಲಾಗಿದೆ. ಮೃತ ದಂಪತಿ ಮರಣೋತ್ತರ ಪರೀಕ್ಷೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಈ‌ ನಡುವೆ ಗುರುವಾರ (ಇಂದು) ಮಧ್ಯಾಹ್ನ ಮೃತದೇಹಗಳನ್ನು ಮುಂದಿಟ್ಟು ಮೃತನ ಸಂಬಂಧಿಕರು, ಸ್ನೇಹಿತರು ಹಾಗೂ ಕುಶಾಲನಗರ, ಕೊಪ್ಪ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಶವಾಗಾರದ ಮುಂಭಾಗ ದಂಪತಿಗಳ ಸಾವಿಗೆ ಕಾರಣರಾದ ರಿಯಲ್ ಎಸ್ಟೇಟ್ ಮಾಫಿಯಾಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ಆಗ್ರಹಿಸಿದರು. ಆರೋಪಿಗಳು ಪ್ರಭಾವ ಶಾಲಿಗಳಾಗಿದ್ದು ಹಲವರಿಗೆ ವಂಚನೆ ಎಸಗಿದ್ದಾರೆ. ಇದರಿಂದ ಅಮಾಯಕ ದಂಪತಿ ಪ್ರಾಣ ಕಳೆದುಕೊಳ್ಳುವಂತಾಗಿದೆ.‌ ಇಂತಹ ಪ್ರಕರಣಗಳು ಮರುಕಳಿಸದಂತೆ ಆರೋಪಿಗಳನ್ನು ಕೂಡಲೆ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಪೊಲೀಸರನ್ನು ಒತ್ತಾಯಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *