Connect with us

    KARNATAKA

    ಮಡಿಕೇರಿಯ ಹೋಮ್ ಸ್ಟೇ ನಲ್ಲಿ ಗ್ಯಾಸ್ ಗೀಸರ್ ಅನಿಲ ಸೋರಿಕೆಯಿಂದ ಮೃತಪಟ್ಟ ಯುವತಿ

    ಮಡಿಕೇರಿ ಅಕ್ಟೋಬರ್ 25: ಮಡಿಕೇರಿಯ ಹೋಮ್ ಸ್ಟೇ ನಲ್ಲಿ ಗ್ಯಾಸ್ ಗೀಸರ್ ನ ಅನಿಲ ಸೊರಿಕೆಯಿಂದ ಸ್ನಾನಕ್ಕೆ ತೆರಳಿದ್ದ ಯುವತಿಯೊಬ್ಬಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ನಡೆದಿದೆ.


    ಮೃತಳನ್ನು ಬಳ್ಳಾರಿ ತೋರಣಗಲ್ಲು ನಿವಾಸಿ ವಿಘ್ನೇಶ್ವರಿ (24) ಎಂದು ಗುರುತಿಸಲಾಗಿದ್ದು, ಇವರು ಮುಂಬೈನಲ್ಲಿ ಉದ್ಯೋಗದಲ್ಲಿದ್ದರು. ತಮ್ಮ ನಾಲ್ವರು ಸ್ನೇಹಿತೆಯರೊಂದಿಗೆ ಎರಡು ದಿನಗಳ ಹಿಂದೆ ಮಡಿಕೇರಿಗೆ ಬಂದಿದ್ದರು. ಮಡಿಕೇರಿಯ ಡೈರಿ ಫಾರ್ಮ್ ಪ್ರದೇಶದಲ್ಲಿ ಹೋಂ ಸ್ಟೇ ಯನ್ನು ಕಾಯ್ದಿರಿಸಿದ್ದರು. ಭಾನುವಾರ ರಾತ್ರಿ 8:30 ಕ್ಕೆ ಬಾತ್ ರೂಮ್ ಗೆ ತೆರಳಿದ ವಿಘ್ನೇಶ್ವರಿ ಎಷ್ಟು ಸಮಯವಾದರೂ ವಾಪಸ್ಸಾಗಲಿಲ್ಲ. ಇದರಿಂದ ಅನುಮಾನಗೊಂಡ ಇತರ ಯುವತಿಯರು ಬೀಗ ಮುರಿದು ಬಾತ್ ರೂಮ್ ಒಳಗೆ ಪ್ರವೇಶಿಸಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ಆಕೆ ಕೊನೆಯುಸಿರೆಳೆದಿದ್ದರು.

    ಮೂಲಗಳ ಪ್ರಕಾರ ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿದ್ದೇ ವಿಘ್ನೇಶ್ವರಿ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಗ್ಯಾಸ್ ಗೀಸರ್ ಅಳವಡಿಸಲಾಗಿದ್ದ ಆ ಪ್ರದೇಶದಲ್ಲಿ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಇರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *