Connect with us

KARNATAKA

ಅಮರ ಪ್ರೇಮಿಗಳ ಗಲಾಟೆ ಮತ್ತು ಪ್ರೀತಿಗೆ ಅಮಾಯಕ ಬಲಿ

ಕಾರವಾರ ಫೆಬ್ರವರಿ 23: ಇಬ್ಬರು ಪ್ರೇಮಿಗಳ ನಡುವೆ ವೈಮನಸ್ಸು ಮತ್ತು ಪ್ರೀತಿಗೆ ಒಬ್ಬ ಅಮಾಯಕ ಪ್ರಾಣ ಕಳೆದುಕೊಂಡಿದ್ದಾನೆ. ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂದು ಭಗ್ನಪ್ರೇಮಿಯೊಬ್ಬ ಅವಳ ಗಂಡನನ್ನೆ ಕೊಲೆ ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ. ಭಗ್ನಪ್ರೇಮಿ ಪ್ರೀತಮ್ ಡಿಸೋಜನೇ ತನ್ನ ಪ್ರೇಯಸಿಯ ಗಂಡನನ್ನೇ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿ ಪ್ರೀತಮ್ ಶಿರಸಿ ಮೂಲದ ಪೂಜಾ ಎಂಬಾಕೆಯನ್ನು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದ, ಇಬ್ಬರು ರೆಜಿಸ್ಟರ್ ಮ್ಯಾರೆಜ್ ಮಾಡಿಕೊಳ್ಳುವವರೆಗೆ ಪ್ರೀತಿ ಇತ್ತು, ಆದರೆ ಪ್ರೀತಮ್ ಗೆ ಒಂದು ಲವ್ ಅಫೆರ್ ಇರುವುದು ಪೂಜಾಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡಿದ್ದ ಪೂಜಾ ಶಿರಸಿ ಬಿಟ್ಟು ಬೆಂಗಳೂರಿಗೆ ಹೋಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.


ಈ ವೇಳೆ ಬೆಂಗಳೂರಿಗೆ ಹೋದಾಗ ಪರಿಚಯವಾದ ಸಾಗರ ತಾಲೂಕಿನ ನೀಚಡಿಯ ಗಂಗಾಧರ್ ಎನ್ನುವಾತನನ್ನು ಮದುವೆಯಾಲು ನಿರ್ಧರಿಸಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಮದುವೆ ಕೂಡ ಆಗುತ್ತೆ. ಸಂತೋಷವಾಗಿ ಜೀವನ ಕೂಡ ನಡೆಸುತ್ತಿದ್ದರು. ಆದ್ರೆ, ಇತ್ತ ಆಕ್ರೋಶಗೊಂಡಿದ್ದ ಪ್ರೀತಮ್, ಪೂಜಾಳ ಗಂಡನನ್ನೇ ಕೊಲೆ ಮಾಡಿದ್ದಾನೆ. ಶಿರಸಿಯಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್ಆರ್ ಟಿಸಿ ಬಸ್ ನಲ್ಲಿ ಪ್ರೀತಮ್ ಗಂಗಾಧರ ಜೊತೆ ಗಲಾಟೆ ಮಾಡಿಕೊಂಡಿದ್ದು, ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ಗಂಗಾಧರ್ ಗೆ ಇರಿದು ಕೊಲೆ ಮಾಡಿ, ಪರಾರಿಯಾಗಿದ್ದಾನೆ.


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಕೊಲೆ ಆದವನ ಪತ್ನಿ ಪೂಜಾಳನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ವಿಚಾರಣೆ ವೇಳೆ ಕೊಲೆ ಮಾಡಿದವನ ಹೆಸರು ಊರು ಎಲ್ಲ ಮಾಹಿತಿ ತಾನಾಗಿಯೇ ಹೇಳಿದ್ದಾಳೆ‌. ಕೂಡಲೇ ನಾಕಾಬಂಧಿ ಮಾಡಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಳಿಕ ಕೊಲೆ ಆರೋಪಿ ಮತ್ತು ಆತನ ಪ್ರಿಯತಮೆಯನ್ನು ಪೊಲೀಸರ ವಿಚಾರಣೆ ನಡೆಸಿದಾಗ, ಎಲ್ಲಾ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ 10 ವರ್ಷದ ಪ್ರೀತಿ ಬಗ್ಗೆ ಬಾಯಿಬಿಟ್ಟ ಇಬ್ಬರು, ಗಲಾಟೆ ಬಳಿಕ ಬೆರೆ ಮದುವೆಯಾದರೂ ಮತ್ತೆ ಪೂಜಾ ಹಳೆಯ ಪ್ರೇಮಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಈ ವೇಳೆ ನಮ್ಮಿಬ್ಬರ ಪ್ರೀತಿಗೆ ಗಂಗಾಧರ ಅಡ್ಡಿ ಆಗಿರುವುದು ಇಬ್ಬರಿಗೂ ಸಹಿಸುವುದಕ್ಕೆ ಆಗಲ್ಲ. ಹಾಗಾಗಿ ನಿನ್ನೆ ಶಿರಸಿಯಲ್ಲಿದ್ದ ಗಂಗಾಧರ ಅಕ್ಕಳ ಮನೆಯ ಕಾರ್ಯಕ್ರಮದ ನಿಮಿತ್ತ, ಪತ್ನಿಯ ಜೊತೆಗೆ ಅಕ್ಕನ ಮನೆಗೆ ಬಂದಿದ್ದ ಗಂಗಾಧರ, ಕಾರ್ಯಕ್ರಮ ಮುಗಿಸಿ ಶಿರಸಿಯಿಂದ ಬೆಂಗಳೂರು ಬಸ್ ಹತ್ತಿ ಹೊಗುತ್ತಿದ್ದ. ಈ ವೇಳೆ ಬಸ್ ಹತ್ತಿದ ಪ್ರಿತಂ ಜಗಳ ಮಾಡಿಕೊಂಡು ಗಂಗಾಧರ ಎದೆಗೆ ಚಾಕುವಿನಿಂದ ಚುಚ್ಚಿದ್ದಾನೆ.

ಇಬ್ಬರ ನಡುವಿನ ಪ್ರೀತಿ ಮತ್ತು ವೈಮನಸ್ಸಿಗೆ ಒಂದು ಅಮಾಯಕ ಜೀವ ಬಲಿಯಾಗಿದೆ. ಸದ್ಯ ಪ್ರೇಮಿಗಳು ಜೈಲು ಕಂಬಿ ಎಣಿಸುತ್ತಿದ್ದಾರೆ. ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣಿರು ಸುರಿಸುವಂತಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *