LATEST NEWS
ಬಂಟ್ವಾಳ – ಡ್ರೈವಿಂಗ್ ವೇಳೆ ಲಾರಿ ಚಾಲಕನಿಗೆ ಮೂರ್ಛೆ ರೋಗ – ಡಿವೈಡರ್ ಏರಿ ನಿಂತ ಲಾರಿ
ಬಂಟ್ವಾಳ ಫೆಬ್ರವರಿ 12: ಡ್ರೈವಿಂಗ್ ವೇಳೆ ಚಾಲಕನಿಗೆ ಮೂರ್ಛೆ ರೋಗ ಬಂದ ಪರಿಣಾಮ ಲಾರಿ ಡಿವೈಡರ್ ಹತ್ತಿ ನಿಂತ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ರ ತುಂಬೆ ಸಮೀಪ ನಡೆದಿದೆ,
ಲಾರಿ ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುತ್ತಿತ್ತು ಎಂದು ಹೇಳಲಾಗಿದ್ದು. ಡ್ರೈವಿಂಗ್ ವೇಳೆ ಚಾಲಕನಿಗೆ ಮೂರ್ಛೆ ರೋಗ ಬಂದಿದೆ. ಈ ವೇಳೆ ಲಾರಿ ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು, ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಡಿವೈಡರ್ ಮೇಲೆ ಅಳವಡಿಸಿದ್ದ ರಸ್ತೆ ಸೂಚನಾ ಫಲಕಕ್ಕೆ ಹಾನಿಯಾಗಿರುವುದು ಬಿಟ್ಟರೆ ಉಳಿದಂತೆ ಯಾವುದೇ ಹಾನಿ ಉಂಟಾಗಿಲ್ಲ.