DAKSHINA KANNADA
ಉಪ್ಪಿನಂಗಡಿ – ಚಲಿಸುತ್ತಿದ್ದ ಲಾರಿ ಬೆಂಕಿಗಾಹುತಿ

ಉಪ್ಪಿನಂಗಡಿ ಫೆಬ್ರವರಿ 26 : ಚಲಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಾರಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ಶಿರಾಡಿ ಘಾಟಿಯ ರಾಜಕಟ್ಟೆ ಎಂಬಲ್ಲಿ ಫೆಬ್ರವರಿ .25ರಂದು ರಾತ್ರಿ ಸಂಭವಿಸಿದೆ.
ಮಂಗಳೂರಿನಿಂದ ಹಾಸನ ಕಡೆಗೆ ಕಲ್ಲಿದ್ದಲ್ಲನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಳಗೆ ರಾಜಕಟ್ಟೆ ಎಂಬಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸಕ್ರ್ಯೂಟ್ ಘಟನೆಗೆ ಕಾರಣವೆನ್ನಲಾಗಿದೆ. ಲಾರಿಯು ಭಾಗಶಃ ಸುಟ್ಟು ಹೋಗಿದೆ.
