Connect with us

    LATEST NEWS

    ಶಬರಿಮಲೆ ಅಯ್ಯಪ್ಪ ದೇವರೇ ಅಲ್ಲ ಎಂದ ನಟ ಪ್ರಕಾಶ್ ರೈ

    ಶಬರಿಮಲೆ ಅಯ್ಯಪ್ಪ ದೇವರೇ ಅಲ್ಲ ಎಂದ ನಟ ಪ್ರಕಾಶ್ ರೈ

    ಬೆಂಗಳೂರು ನವೆಂಬರ್ 5: ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವರೆ ಅಲ್ಲ ಎಂದು ಹೇಳುವ ಮೂಲಕ ಪ್ರಕಾಶ್ ರೈ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಯಾವ ದೇವರು ಮಹಿಳೆಯರನ್ನು ನೋಡುವುದಿಲ್ಲವೋ ಅದು ದೇವರೇ ಅಲ್ಲ ಎಂದು ನಟ ಪ್ರಕಾಶ್ ರೈ ಶಬರಿಮಲೆ ಅಯ್ಯಪ್ಪ ಸ್ವಾಮಿ ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ.

    ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಶಬರಿಮಲೆಗೆ ಅವಕಾಶ ನೀಡದ ಹಿನ್ನಲೆಯಲ್ಲಿ ಮಾತನಾಡಿದ ನಟ ಪ್ರಕಾಶ್ ರೈ ಮಹಿಳೆಯರನ್ನು ನೋಡದ ದೇವರು ದೇವರೇ ಅಲ್ಲ ಎಂದು ಹೇಳುವ ಮೂಲಕ ನಟ ಪ್ರಕಾಶ್ ರೈ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

    ಗಲ್ಫ್ ನ ಅಂತರಾಷ್ಟ್ರೀಯ ಪುಸ್ತಕ ಮೇಳೆದಲ್ಲಿ ಭಾಗಿಯಾಗಿದ್ದ ಪ್ರಕಾಶ್ ರೈ ಅವರು ಶಬರಿಮಲೆ ದೇವಸ್ಥಾನದ ಕುರಿತು ಮಾತನಾಡುತ್ತಾ, ಹೆಣ್ಣು ಅಂದ್ರೆ ತಾಯಿ, ಭೂಮಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಅದೇ ಹೆಣ್ಣಿನಿಂದ ಜನ್ಮ ತಾಳುತ್ತೇವೆ. ಆದರೆ ಅದೇ ಹೆಣ್ಣನ್ನು ಪೂಜೆಯಿಂದ ಹೊರಗಿಡೋದು ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ಹೆಣ್ಣು ಮಕ್ಕಳ ಪ್ರಾರ್ಥನೆಗೆ ಅವಕಾಶ ಕೊಡದೇ ಇದ್ದರೇ ಅದು ನನ್ನ ಪಾಲಿಗೆ ಧರ್ಮವೇ ಅಲ್ಲ ಅಂತಾ ಕಿಡಿಕಾರಿದರು.

    Share Information
    Advertisement
    Click to comment

    You must be logged in to post a comment Login

    Leave a Reply