Connect with us

DAKSHINA KANNADA

ಮಂಗಳೂರಿನ ಸೋದರಿ ಮತ್ತು ಸೋದರರನ್ನು ಎದುರು ನೋಡುತ್ತಿರುವೆ: ಕನ್ನಡದಲ್ಲಿ ಮೋದಿ ಟ್ವೀಟ್‌

ಮಂಗಳೂರು, ಸೆಪ್ಟಂಬರ್ 01: ಪ್ರಧಾನಿ ಭೇಟಿ ಹಿನ್ನೆಲೆ ಮಂಗಳೂರಿನಲ್ಲಿ ಸಕಲ ಸಿದ್ದತೆ ಏರ್ಪಡಿಸಿದ್ದು, ಇಂದು ಕೇರಳದ ಕೊಚ್ಚಿಗೆ ಭೇಟಿ ನೀಡಿದ್ದಾರೆ. ಈ ಮಧ್ಯೆ ಇಂದು ಕನ್ನಡದಲ್ಲಿ ಟ್ವೀಟ್‌ ಮಾಡಿ ಮಂಗಳೂರಿಗೆ ಬರುವ ಬಗ್ಗೆ ತಿಳಿಸಿದ್ದಾರೆ.

ಇಂದು ಮತ್ತ ನಾಳೆ ಕೇರಳ ಹಾಗು ಕರ್ನಾಟಕದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವೆ. ಈ ಕಾರ್ಯಕ್ರಮಗಳು ಪ್ರಮುಖ ಕ್ಷೇತ್ರಗಳಾದ ನಗರಾಭಿವೃದ್ಧಿ, ರಕ್ಷಣೆ, ಬಂದರು, ಇಂಧನ ಮುಂತಾದುವುಗಳಿಗೆ ಸೇರಿವೆ.

ನಾಳೆ, ಸೆಪ್ಟೆಂಬರ್‌ 2 ರಂದು 3,800 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ಯೋಜನೆಗಳ ಉದ್ಘಾಟನೆ ಅಥವಾ ಶಿಲಾನ್ಯಾಸ ನೆರವೇರಿಸಲಾಗುವುದು. ಈ ಮುಖ್ಯವಾದ ಯೋಜನೆಗಳು ಯಾಂತ್ರೀಕರಣ ಮತ್ತು ಕೈಗಾರಿಕೀಕರಣಕ್ಕೆ ಸಂಬಂಧಿಸಿದ್ದಾಗಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *