LATEST NEWS
ಈ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 ಸ್ಥಾನ ಗೆಲ್ಲುತ್ತೇವೆ – ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್

ಮಂಗಳೂರು ಮೇ 26: ಶಿಕ್ಷಕರ ಹಾಗೂ ಪದವಿಧರ ಚುನಾವಣೆಯಲ್ಲಿ ಆರು ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ಆಯನೂರು ಮಂಜುನಾಥ್, ಕೆಕೆ. ಮಂಜುನಾಥ್ ಈ ಬಾರಿ ಗೆಲ್ಲಲಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಜನ್ರಿಗೆ ಗೊತ್ತಾಗಿದೆ ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂಬುದು. ಹೀಗಾಗಿ ಬಿಜೆಪಿಯಿಂದ ಅನೇಕ ಕಾರ್ಯಕರ್ತರು ನಮ್ಮ ಪಕ್ಷ ಸೇರ್ಪಡೆ ಆಗಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕನಿಷ್ಟ 20 ಸ್ಥಾನ ಗೆಲ್ಲಲಿದೆ. ಕೇಂದ್ರದಲ್ಲಿ ಹತ್ತು ವರ್ಷ ಬಿಜೆಪಿ ಆಡಳಿತ ನೋಡಿದ್ದಾರೆ. ಬಿಜೆಪಿ ಆಡಳಿತದಿಂದ ಜನ್ರು ಬೇಸತ್ತು ಹೋಗಿದ್ದಾರೆ. ದೇಶದಲ್ಲಿ ಇಂಡಿಯಾ ಮೈತ್ರಿ ಕೂಟ ಅಧಿಕಾರ ಪಡೆಯಲಿದೆ ಎಂದರು. ನರೇಂದ್ರ ಮೋದಿ ಅಭಿವೃದ್ಧಿ ಬಿಟ್ಟು ಸಮಾಜದ ಬೇರೆ ವಿಚಾರದ ಮೇಲೆ ಮತ ಕೇಳ್ತಾ ಇದ್ದಾರೆ. ಅಭಿವೃದ್ಧಿ ಬಿಟ್ಟು ಸೋಲಿನ ಭೀತಿಯಲ್ಲಿ ಸಮಾಜ ಹೊಡಿಯುವ ಕಾರ್ಯ ಮಾಡ್ತಾ ಇದ್ದಾರೆ. ಜನರು ಕಾಂಗ್ರೆಸ್ ಸರಕಾರ ಬರಬೇಕೆಂಬು ವಿಶ್ವಸ ವ್ಯಕ್ತಪಡಿಸಿದ್ದಾರೆ ಎಂದರು.
