LATEST NEWS
ಬೆಳ್ತಂಗಡಿ ಶಿರ್ಲಾಲುವಿನಲ್ಲಿ ಕಾಣಿಸಿಕೊಂಡ ಮಿಡತೆ ಅಪಾಯಕಾರಿಯಲ್ಲ

ಪಶ್ಚಿಮ ಘಟ್ಟದಲ್ಲಿ ವಾಸಿಸುವ ಅಳಿವಿನಂಚಿನಲ್ಲಿರುವ ಕಾಫಿ ಮಿಡತೆ
ಮಂಗಳೂರು ಜೂ.05: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಪ್ರದೇಶಗಳಲ್ಲಿ ಕಾಣಿಸಿಕೊಂಡ ಮಿಡತೆಗಳು ಅಪಾಯಕಾರಿಯಲ್ಲ , ಇವು ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುವ ಅಳಿವಿನಂಚಿನಲ್ಲಿರುವ ಮಿಡತೆ ಪ್ರಭೇದ ಎಂದು ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಸಂಗ್ರಹಿಸಿರುವ ಮಿಡತೆ ಜಾತಿಗಳನ್ನು ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರಿಗೆ ಕಳುಹಿಸಲಾಗಿತ್ತು. ಈಗ ಕೀಟಶಾಸ್ತ್ರಜ್ಞರಿಂದ ಬಂದಿರುವ ವರದಿಯ ಪ್ರಕಾರ ಕೀಟವು ಕಾಫಿ ಮಿಡತೆ ಎಂದು ಗುರುತಿಸಲ್ಪಟ್ಟಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಸಂಗ್ರಹಿಸಿರುವ ಮಿಡತೆ ಜಾತಿಗಳನ್ನು ಸೆಂಟ್ರಲ್ ಪ್ಲಾಂಟೇಷನ್‌ಕ್ರಾಪ್ಸ್ರಿಸರ್ಚ್ಇನ್ಸ್ಟಿಟ್ಯೂಟ್, ನ್ಯಾಷನಲ್ ಬ್ಯುರೋಆಫ್‌ಅಗ್ರಿಕಲ್ಚರ್‌ಇನ್‌ಸೆಕ್ಟ್ರಿಸೋರ್ಸ್ಸ್, ಬೆಂಗಳೂರು ಹಾಗೂ ಗಾಂಧಿ ಕೃಷಿ ವಿಜ್ಞಾನಕೇಂದ್ರ, ಬೆಂಗಳೂರಿಗೆ ಕಳುಹಿಸಳಾಗಿತ್ತು. ಕೀಟಶಾಸ್ತ್ರಜ್ಞ ರಿಂದ ಬಂದಿರುವ ವರದಿಯ ಪ್ರಕಾರ ಕೀಟವು ಒಲಾರ್ಚಸ್ ಮಿಲಿಯಾರಿಸ್ ಮಿಲಿಯಾರಿಸ್ ಸ್ಪಾಟೆಡ್‌ಕಾಫಿ ಮಿಡತೆ ಎಂದುಗುರುತಿಸಲ್ಪಟ್ಟಿದೆ.

ಈ ಮಿಡತೆಗಳು ದಕ್ಷಿಣ ಭಾರತದ ಪಶ್ಚಿಮಘಟ್ಟಗಳಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಅಳವಿನಂಚಿನಲ್ಲಿರುವ ಕೀಟವಾಗಿರುತ್ತದೆ. ಈ ಮಿಡತೆ ಕಾಫಿ, ಬಾಳೆ, ಗೇರು, ಅಡಿಕೆ, ತೆಂಗು, ಏಲಕ್ಕಿ ಹಾಗೂ ಭತ್ತದ ಬೆಳೆಯ ಮೇಲೆ ಕಾಣಿಸುವ ಸಾಧ್ಯತೆಗಳಿದ್ದು, ಇವುಗಳು ಯಾವುದೇ ಅಪಾಯಕಾರಿಯಾಗಿರುವುದಿಲ್ಲ.
ಭೂಮಿಯ ಉಳುಮೆಯಿಂದ ಇವುಗಳು ಮೊಟ್ಟೆ ಹಂತದಲ್ಲಿ ನಿರ್ವಹಣೆ ಮಾಡ ಬಹುದಾಗಿರುತ್ತದೆ. ಮರಿ ಮಿಡತೆಗಳನ್ನು ಹಿಡಿದು ಬೇರೆಡೆಗೆ ಬಿಡಬಹುದಾಗಿದೆ. ಅಳವಿನಂಚಿನಲ್ಲಿರುವ ಈ ಕೀಟದ ನಿರ್ವಹಣೆಯನ್ನು ಎಚ್ಚರಿಕೆಯಿಂದ ಮಾಡಬೇಕಾಗಿದೆ.
ಕೀಟಬಾಧೆಯಿಂದ ಬೆಳೆ ನಾಶವಾದ ಸಂದರ್ಭದಲ್ಲಿ ಬೇವಿನ ಮೂಲದ ಕೀಟನಾಶಕಗಳನ್ನು ಅಥವಾ ಲ್ಯಾಂಬ್ಡಾ ಸೈಹಾಲೋಥ್ರಿನ್ 5 ಇಸಿ 1.5 ಮಿ.ಲೀ. ಪ್ರತಿಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬಹುದಾಗಿದೆ. ಅಳವಿನಂಚಿನಲ್ಲಿರುವ ಈ ಕೀಟದ ಸಂರಕ್ಷಣೆ ಅವಶ್ಯವಿರುತ್ತದೆ ಎಂದು ಕೃಷಿ ನಿರ್ದೇಶಕರು ಮಂಗಳೂರು ಇವರು ತಿಳಿಸಿದ್ದಾರೆ.