LATEST NEWS
ಮತ್ಸ್ಯಗಂಧ ಎಕ್ಸಪ್ರೆಸ್ ರೈಲಿನ ಹಳಿ ಮೇಲೆ ಬಿದ್ದ ಬೃಹತ್ ಗಾತ್ರದ ಮರ – ಲೋಕೋಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಮಂಗಳೂರು ಜುಲೈ 24: ರೈಲು ಹಳಿಯ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿದ್ದು, ಮತ್ಸ್ಯಗಂಧ ಎಕ್ಸ ಪ್ರೇಸ್ ರೈಲಿನ ಲೋಕೋಪೈಲೆಟ್ ಗಳ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ಬಾರ್ಕೂರು- ಉಡುಪಿ ನಡುವಿನ ಹಳಿ ಬಳಿ ನಡೆದಿದೆ.
ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಬಾರ್ಕೂರು – ಉಡುಪಿ ನಡುವೆ ಕಿ.ಮೀ ಸಂಖ್ಯೆ 686/32ರ ಬಳಿ ಸಾಗುತ್ತಿದ್ದಾಗ ಹಳಿ ಮೇಲೆ ಮರ ಬಿದ್ದಿರುವುದನ್ನು ಲೊಕೊ ಪೈಲಟ್ ಪುರುಷೋತ್ತಮ ಹಾಗೂ ಸಹಾಯಕ ಲೊಕೊ ಪೈಲಟ್‌ಪೈಲಟ್ ಮಂಜುನಾಥ ನಾಯ್ಕ್ ಗಮನಿಸಿದ್ದರು. ತಕ್ಷಣ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದರು. ರೈಲ್ವೆ ಸಿಬ್ಬಂದಿಯ ತಂಡವು ಮರವನ್ನು ತೆರವುಗೊಳಿಸಿದ ಬಳಿಕ ರೈಲು ಪ್ರಯಾಣ ಮುಂದುವರಿಸಿತು.
ಸಮಯಪ್ರಜ್ಞೆ ತೋರಿ ಅಪಘಾತ ತಪ್ಪಿಸಲು ಕಾರಣರಾದ ಲೊಕೊ ಪೈಲಟ್ ಪುರುಷೋತ್ತಮ ಹಾಗೂ ಸಹಾಯಕ ಲೊಕೊ ಪೈಲಟ್ ಮಂಜುನಾಥ ನಾಯ್ಕ್ ಅವರಿಗೆ ಕೊಂಕಣ ರೈಲ್ವೆ ನಿಗಮ ನಿಯಮಿತದ ಮುಖ್ಯ ಮಹಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಝಾ ಅವರು ತಲಾ ₹15 ಸಾವಿರ ನಗದು ಬಹುಮಾನವನ್ನು ಘೋಷಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ವ್ಯವಸ್ಥಾಪಕಿ (ಸಾರ್ವಜನಿಕ ಸಂಪರ್ಕ) ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.