Connect with us

LATEST NEWS

ರಾಜ್ಯದಲ್ಲಿ ಇನ್ನೊಂದಿಷ್ಟು ದಿನಗಳ ಕಾಲ ಲಾಕ್​ಡೌನ್ ಮುಂದುವರಿಸಬೇಕು- ಕಂದಾಯ ಸಚಿವ ಆರ್ ಅಶೋಕ್

ಉಡುಪಿ, ಮೇ 18: ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಈ ಬಗ್ಗೆ ಅಂತಿಮ ತೀರ್ಮಾನ ಮುಖ್ಯಮಂತ್ರಿ ಅವರು ತೆಗೆದುಕೊಳ್ಳುತ್ತಾರೆ ಎಂದು ಕಂದಾಯ ಸಚಿವ ಆರ್​ ಅಶೋಕ್ ಹೇಳಿದರು.

ಕರಾವಳಿ ಭಾಗದಲ್ಲಿ ತೌಕ್ತೆ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಪ್ರಮಾಣ ಪರಿಶೀಲಿಸಿ ಮಾತನಾಡಿದ ಅವರು, ಈಗಿನ ಸೋಂಕಿನ ಪ್ರಮಾಣ ನೋಡಿದರೇ ರಾಜ್ಯದಲ್ಲಿ ಇನ್ನೊಂದಿಷ್ಟು ದಿನಗಳ ಕಾಲ ಲಾಕ್​ಡೌನ್ ಮುಂದುವರಿಸಬೇಕು. ಇದು ನನ್ನ ವೈಯಕ್ತಿಕ ಅಭಿಮತ. ಆದರೆ, ಅಂತಿಮವಾಗಿ ಸಿಎಂ ಅವರು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮಹಾರಾಷ್ಟ್ರ, ದೆಹಲಿ, ಕೇರಳದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.

ಜನರು ನಗರ ಬಿಟ್ಟು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಹಳ್ಳಿಗಳಲ್ಲಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ, ಹಳ್ಳಿಗಳತ್ತ ವೈದ್ಯರು ಗಮನಹರಿಸಬೇಕು. ಗ್ರಾಮಗಳತ್ತ ವೈದ್ಯರು ತೆರಳುವ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ ಎಂದರು.

ಬೆಂಗಳೂರು ಗ್ರಾಮಾಂತರದಲ್ಲಿ ಪೈಲಟ್ ಪ್ರಾಜೆಕ್ಟ್​ಗೆ ಚಾಲನೆ ದೊರೆತಿದೆ. ಪಿಜಿ ಮತ್ತು ನರ್ಸಿಂಗ್ ಫೈನಲ್ ಇಯರ್ ಸ್ಟೂಡೆಂಟ್​ಗಳನ್ನು ಬಳಸಿಕೊಳ್ಳುತ್ತೇವೆ. ಸಾಕಷ್ಟು ಮಂದಿ ವೈದ್ಯರು ಸೇವೆ ನೀಡಲು ಮುಂದೆ ಬಂದಿದ್ದಾರೆ.

ಒಂದು ತಿಂಗಳಿಗೆ ಆಗುವಷ್ಟು ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ನೀಡುತ್ತೇವೆ. ಒಂದು ಹಳ್ಳಿಗೆ ವಾರಕ್ಕೆ ಮೂರು ಸಲ ವೈದ್ಯರು ಭೇಟಿ ಮಾಡುವ ಬಗ್ಗೆ ಶೀಘ್ರ ಆದೇಶ ಬರುತ್ತೆ. ಬೆಂಗಳೂರು ಗ್ರಾಮಾಂತರದಲ್ಲಿ ಈ ಅಭಿಯಾನ ಆರಂಭಿಸಿದ್ದೇವೆ ಎಂದು ಸಚಿವರು ತಿಳಿಸಿದರು. ಅಸಮರ್ಪಕ ಲಸಿಕೆ ಸರಬರಾಜು ವಿಚಾರವಾಗಿ ಮಾತನಾಡಿದ ಅವರು, ವ್ಯಾಕ್ಸಿನ್ ಕುರಿತು ನಾಳೆಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಸಮರ್ಪಕ ರೀತಿಯಲ್ಲಿ ವ್ಯಾಕ್ಸಿನ್ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಚಂಡಮಾರುತದಿಂದ ಮೂರು ಜಿಲ್ಲೆಗೆ ಹಾನಿಯಾಗಿದೆ. ಉಡುಪಿಯಲ್ಲಿ ಬಹಳ ಅನಾಹುತ ಆಗಿದೆ. ನೂರಾರು ತೆಂಗಿನ ಮರ, 35 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. 68 ಕೋಟಿ ರೂ. ಮೌಲ್ಯದ ಆಸ್ತಿ ಚಂಡಮಾರುತಕ್ಕೆ ನಾಶವಾಗಿದೆ.

ಎನ್​ಡಿಆರ್​ಎಫ್ ನಿಧಿಯಿಂದ ಹಣ ಬಿಡುಗಡೆ ಮಾಡುತ್ತೇವೆ. ಅಲ್ಲದೆ, ಸಿಎಂ ಜೊತೆ ಮಾತನಾಡಿ ಶಾಶ್ವತ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.

ನೀರು ನುಗ್ಗಿದ ಮನೆಗೆ ತಕ್ಷಣ 10 ಸಾವಿರ ರೂ. ಪರಿಹಾರವನ್ನು ಶೀಘ್ರವೇ ನೀಡುತ್ತೇವೆ. ಸಮುದ್ರ ತೀರಕ್ಕೆ ಕಲ್ಲುಗಳು ಹಾಕುತ್ತೇವೆ. ಕಪ್ಪು ಕಲ್ಲು ಸಾಗಾಟಕ್ಕೆ ಸಮಸ್ಯೆ ಇಲ್ಲ. ಈ ಕುರಿತು ಗಣಿಗಾರಿಕೆ ಸಚಿವ ನಿರಾಣಿಯವರ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.

Video:

Share Information
Continue Reading
Advertisement
Click to comment

Leave a Reply

Your email address will not be published. Required fields are marked *