Connect with us

DAKSHINA KANNADA

ಮಂಗಳೂರಿನಲ್ಲಿ ಬಿಗಿಗೊಂಡ ಲಾಕ್ ಡೌನ್, ಅನಗತ್ಯ ರಸ್ತೆಗಿಳಿದರೆ ವಾಹನ ಜಪ್ತಿ

ಮಂಗಳೂರಿನಲ್ಲಿ ಬಿಗಿಗೊಂಡ ಲಾಕ್ ಡೌನ್, ಅನಗತ್ಯ ರಸ್ತೆಗಿಳಿದರೆ ವಾಹನ ಜಪ್ತಿ

 

ಮಂಗಳೂರು,ಮಾರ್ಚ್ 30:   ಕೊರೊನಾ ಮಹಾಮಾರಿ ತಡೆಯುವ ಕಾರಣಕ್ಕಾಗಿ ಇಡೀ ದೇಶದಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ.

ಜನ ಮನೆಯಲ್ಲೇ ಇದ್ದು, ಸಾಮಾಜಿಕ ತರ ಕಾಯ್ದುಕೊಳ್ಳವುದರಿಂದ ಮಾತ್ರ ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟಲು ಸಾಧ್ಯ ಎನ್ನುವ ಕಾರಣಕ್ಕಾಗಿ ಈ ಲಾಕ್ ಡೌನ್ ಅನ್ನು ಜಾರಿಗೆ ತರಲಾಗಿದೆ

. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲೆಯ ಗಡಿಭಾಗವಾದ ಕೇರಳದ ಕಾಸರಗೋಡಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ರೋಗ ಹರಡದಂತೆ ಎಚ್ಚರಿಕೆವಹಿಸುವ ನಿಟ್ಟಿನಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಇಂದು ಮುಂಜಾನೆಯಿಂದಲೇ ರಸ್ತೆಗಿಳಿದ ಪೋಲೀಸ್ ಇಲಾಖೆ ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಗಸ್ತು ಆರಂಭಿಸಿದೆ.

ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಪಿಕೆಟಿಂಗ್ ನಡೆಸಿರುವ ಪೋಲೀಸರು ರಸ್ತೆಯಲ್ಲಿ ತಿರುಗಾಡುವ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾರೆ.

ಮುಖ್ಯವಾಗಿ ದ್ವಚಕ್ರ ವಾಹನಗಳನ್ನು ನಿಲ್ಲಿಸಿ ಸೂಕ್ತ ಕಾರಣಗಳಿಲ್ಲದೆ ತಿರುಗಾಡುವ ವಾಹನಗಳನ್ನು ಸ್ಥಳದಲ್ಲೇ ಸೀಝ್ ಮಾಡಲಾಗುತ್ತಿದ್ದಾರೆ.

ಮುಂದಿನ ಒಂದು ವಾರಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಅನಿವಾರ್ಯವಾಗಿದ್ದು, ಈ ನಿಟ್ಡಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಅದಲ್ಲದೆ ಅರೆಸೇನಾ ಪಡೆಗಳನ್ನೂ ರಸ್ತೆಗಿಳಿಸುವ ಆಯ್ಕೆ ಕೂಡಾ ಜಿಲ್ಲಾಡಳಿತದ ಮುಂದಿದೆ.

ಅಗತ್ಯ ಸಾಮಾಗ್ರಿಗಳನ್ನು ಮನೆ ಬಾಗಿಲಿಗೇ ಕೊಂಡೊಯ್ಯವ ವ್ಯವಸ್ಥೆಯನ್ನೂ ಸಮರ್ಪಕವಾಗಿ ಮಾಡಲು ಜಿಲ್ಲಾಡಳಿತ ಹಲವು ಕ್ರಮಗಳನ್ನೂ ಕೈಗೊಂಡಿದೆ.

ದಿನಸಿಗಾಗಿ ಆ್ಯಪ್‌ ಮೂಲಕ ಆರ್ಡರ್, ಅಪಾರ್ಟ್‌ಮೆಂಟ್ ಗಳು ತಮಗರ ಬೇಕಾದ ದಿನಸಿ ಗಳ ಪಟ್ಟಿಯನ್ನು ಗೋಡೆಗೆ ಅಂಟಿಸಿ ಮನೆ ಬಾಗಿಲಿಗೆ ಸಾಮಾಗ್ರಿಗಳು ಬರಲಿವೆ ಎಂದು ಮಂಗಳೂರು ಮಹಾನಗರ ಪಾಲಿಕರ ಆಯುಕ್ತರು ಈಗಾಗಲೇ ಮಾಹಿತಿ ನೀಡಿದ್ದಾರೆ.

ಗ್ರಾಮಾಂತರ ಭಾಗದಲ್ಲೂ ಇಂಥ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *