LATEST NEWS
ಲಾಕ್‌ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಗೋಶಾಲೆಗಳು – ಸಹಾಯಕ್ಕಾಗಿ ರಾಜ್ಯ ಸರಕಾರಕ್ಕೆ ಮನವಿ
ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಗೋಶಾಲೆಗಳು – ಸಹಾಯಕ್ಕಾಗಿ ರಾಜ್ಯ ಸರಕಾರಕ್ಕೆ ಮನವಿ
ಮಂಗಳೂರು ಎಪ್ರಿಲ್ 15: ಕೊರೊನಾ ಲಾಕ್ ಡೌನ್ ನಿಂದಾಗಿ ಆಹಾರ ಸಿಗದೇ ಪರಿತಪಿಸುವ ಜನರಿಗೆ ಹಲವಾರು ದಾನಿಗಳು ಆಹಾರ ಕಿಟ್ ಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಬೀದಿ ಬದಿ ಪ್ರಾಣಿಗಳಿ ಪ್ರಾಣಿ ಪ್ರಿಯರು ಆಹಾರ ನೀಡುತ್ತಿದ್ದಾರೆ.
ಆದರೆ ಗೋಶಾಲೆಗಳಲ್ಲಿರುವ ಗೋವುಗಳಿಗೆ ಆಹಾರ ಒದಗಿಸಲು ಗೋಶಾಲೆಗಳು ದಾನಿಗಳನ್ನು ನಂಬಿಕೊಂಡಿದ್ದರು, ಆದರೆ ಲಾಕ್ ಡೌನ್ ನಿಂದಾಗಿ ಯಾವುದೇ ವ್ಯವಹಾರಗಳು ನಡೆಯದ ಹಿನ್ನಲೆ ಗೋಶಾಲೆಗಳು ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಗೋವು ಗಳ ದಿನನಿತ್ಯದ ಆಹಾರ ಒದಗಿಸಲು ಪರಿತಪಿಸುವಂತಾಗಿದೆ.
ಗೋಶಾಲೆಗಳಲ್ಲಿರುವ ಗೋವುಗಳಲ್ಲಿ ಬಹುತೇಕ ಅಕ್ರಮ ಗೋಸಾಗಾಟದ ಸಂದರ್ಭದಲ್ಲಿ ಪೋಲಿಸರು ವಶಪಡಿಸಿದ ಗೋವುಗಳಾಗಿದ್ದು, ನ್ಯಾಯಲಯಗಳು ಸರಕಾರದ ಪರವಾಗಿ ಸಾಕುವಂತೆ ಗೋಶಾಲೆಗಳಿಗೆ ಹಸ್ತಾಂತರಿಸಿದೆ. ಗೋಶಾಲೆಗಳಲ್ಲಿನ ಅಂತಹ ಗೋವುಗಳಿಗೆ ಸಂಪೂರ್ಣ ಜವಬ್ದಾರಿ ರಾಜ್ಯ ಸರ್ಕಾರದ್ದೆಂದು ಸುಪ್ರೀಂಕೋರ್ಟ್ ಕೂಡ ಆದೇಶ ನೀಡಿದೆ
ಆದರೂ ಸರಕಾರ ಇಂತಹ ಗೋಶಾಲೆಗಳಿಗೆ ಇದುವರೆಗೂ ಆರ್ಥಿಕ ನೆರವು ನೀಡಿಲ್ಲ, ಗೋ ಶಾಲೆಯಲ್ಲಿ 500-1000 ಕ್ಕೂ ಮಿಕ್ಕಿ ಗೋವುಗಳಿದ್ದರೂ ಗರಿಷ್ಠ 200 ಗೋವುಗಳಿಗೆ ಜಾನುವಾರು ಒಂದಕ್ಕೆ ಕೇವಲ ರೂ 17.50 ಅನುದಾನ ಕೊಡುತ್ತಿದೆ, ಉಳಿದ ಹಣವನ್ನು ಗೋಶಾಲೆಯವರು ಸಾರ್ವಜನಿಕರಿಂದ ದೇಣಿಗೆ ಪಡೆದು ಗೋವುಗಳ ಪಾಲನೆ ಮಾಡುತ್ತ ಬಂದಿದೆ.
ಆದರೆ ಈಗ ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕ ದೇಣಿಗೆ ಪೂರ್ತಿ ನಿಂತು ಹೋಗಿದೆ, ಆದ್ದರಿಂದ ಗೋಶಾಲೆಗಳು ಸಂಪೂರ್ಣವಾಗಿ ಕಂಗಲಾಗಿದೆ, ಮೇವು ತೆಗೆದುಕೊಳ್ಳಲು ಹಣವಿಲ್ಲ, ಮುಂದಿನ ಆರು ತಿಂಗಳು ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ, ಆದ್ದರಿಂದ ಸರಕಾರದ ಪರವಾಗಿ ಸಾಕುವ ಗೋವುಗಳಿಗೆ ಸಂಪೂರ್ಣ ಖಚ್ಚುವೆಚ್ಚ ಸರಕಾರವೇ ಭರಿಸಬೇಕು. ದೊಡ್ಡ ಜಾನುವಾರುಗಳಿಗೆ ದಿನವೊಂದಕ್ಕೆ ರೂ 300/- ಹಾಗೂ ಕರುಗಳಿಗೆ ರೂ 100/- ರಂತೆ ಹಾಗೂ ರಾಜ್ಯದ ರೈತರ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗಿದ್ದು ಇವುಗಳಿಗೂ ತಕ್ಷಣ ಲಾಕ್‌ಡೌನ್ ವಿಶೇಷ ಅನುದಾನ ನೀಡಬೇಕಾಗಿ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣಿ ಮಂಡಳಿ ಸದದ್ಯ ವಿನಯ್ ಎಲ್ ಶೆಟ್ಟಿ ಮನವಿ ಮಾಡಿದ್ದಾರೆ.