LATEST NEWS
ಕುವೈಟಿನಿಂದ ಗಡಿಪಾರು ಆತಂಕದಲ್ಲಿ ಕರಾವಳಿಯ ಇಂಜಿನಿಯರುಗಳು….!
ಕುವೈಟಿನಿಂದ ಗಡಿಪಾರು ಆತಂಕದಲ್ಲಿ ಕರಾವಳಿಯ ಇಂಜಿನೀಯರುಗಳು..!
ಮಂಗಳೂರು. ಎಪ್ರಿಲ್ 10 : ಕುವೈಟಿನಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಭಾರತೀಯ ಇಂಜಿನೀಯರುಗಳು ಕೆಲಸ ಕಳಕೊಳ್ಳುವ ಭೀತಿಯಲ್ಲಿದ್ದಾರೆ.
ಕುವೈಟ್ ಸರಕಾರ ಇತ್ತೀಚೆಗೆ ಹೊಸದಾಗಿ ಜಾರಿಗೆ ತಂದಿರುವ ಕಾನೂನು ತಿದ್ದುಪಡಿ ಭಾರತೀಯರೂ ಸೇರಿದಂತೆ ವಿವಿಧ ರಾಷ್ಟ್ರಗಳ ಸುಮಾರು 50 ಸಾವಿರ ಎಂಜಿನಿಯರ್‌ಗಳು ಉದ್ಯೋಗ ಕಳದುಕೊಳ್ಳುವ ಭೀತಿಯಲ್ಲಿದ್ದಾರೆ. ಅದರಲ್ಲೂ ಕರಾವಳಿ ಪ್ರದೇಶವಾದ ಕಾಸರಗೋಡು, ಮಂಗಳೂರು , ಉಡುಪಿಯ ನೂರಾರು ಇಂಜಿನೀಯರುಗಳು ಕೆಲಸ ಕಳಕೊಳ್ಳುವ ಭೀತಿಯೊಂದಿಗೆ ಅವರ ಕುಟುಂಬಗಳು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ.
ನೂತನ ಕಾನೂನಿನಂತೆ ಇನ್ನು ಮುಂದೆ ಕುವೈಟ್‌ನಲ್ಲಿ ಎಂಜಿನಿಯರ್‌ಗಳಾಗಿ ದುಡಿಯುವ ವಿದೇಶಿಯರು ಈ ದೇಶದ ಕಾನೂನಿನಲ್ಲಿ ಸೂಚಿಸಲಾದ ಸಂಸ್ಥೆಗಳಲ್ಲೇ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.
ವಿಪರ್ಯಾಸವೆಂದರೆ ಭಾರತೀಯ ಮೂಲದ ಶೇ.80 ಎಂಜಿನಿಯರ್‌ಗಳು ಕಲಿತ ಎಂಜಿನಿಯರಿಂಗ್ ಕಾಲೇಜುಗಳು ಎನ್‌ಬಿಎಯಲ್ಲಿ ನೊಂದಣಿಯಾಗಿರುವುದಿಲ್ಲ.
ಇದರಿಂದ ಕುವೈಟ್‌ನಲ್ಲಿ ದುಡಿಯುತ್ತಿರುವ ಸಾವಿರಾರು ಭಾರತೀಯರ ಭವಿಷ್ಯ ತೂಗುಯ್ಯಲೆಯಲ್ಲಿದೆ.
ಕುವೈಟ್ ಸರಕಾರದ ಈ ನಿಯಂತ್ರಣದಿಂದ 15,000-40,000 ಎಂಜಿನಿಯರ್‌ಗಳ ಮೇಲೆ ಪರಿಣಾಮ ಬೀರಬಹುದು ಎಂಬುದಾಗಿ ಉದ್ಯಮ ಸಂಘಟನೆಗಳು ಅಂದಾಜಿಸಿವೆ.
ಕುವೈಟ್ ಸೊಸೈಟಿ ಆಫ್ ಎಂಜಿನಿಯರ್ಸ್(ಕೆಎಸ್‌ಒಇ)ಯಿಂದ ರೆಸಿಡೆನ್ಸಿ ಮತ್ತು ಕೆಲಸದ ಪರವಾನಗಿಗಳನ್ನು ಆಕ್ಷೇಪಾರ್ಹ ಪ್ರಮಾಣ ಪತ್ರ(ಎನ್‌ಒಸಿ) ಕಡ್ಡಾಯಗೊಳಿಸಿರುವುದು ಇದಕ್ಕೆ ಕಾರಣ.
ಈ ಕಾರಣದಿಂದ ಸಾವಿರಾರು ಭಾತೀಯ ಇಂಜಿನೀಯರುಗಳು ಗಡೀಪಾರಾಗುವ ಆತಂಕದಲ್ಲಿದ್ದಾರೆ.
ನೂತನ ಕಾನೂನು ಪ್ರಕಾರ ವಿಶೇಷವಾಗಿ ಭಾರತೀಯ ಇಂಜಿನಿಯರ್‌ಗಳು ಕೆಎಸ್‌ಒಇಯಿಂದ ಪ್ರತ್ಯೇಕ ಪರಿಶೀಲನೆಗೊಳಪಡಬೇಕಾಗುತ್ತದೆ.
ಆದರೆ ಅದು ಸರಕಾರಿ ಸಂಸ್ಥೆಯಲ್ಲ. ಅದೊಂದು ಸಾರ್ವಜನಿಕ ಪ್ರಯೋಜನಕ್ಕಾಗಿ ರೂಪಿಸಿದ ಸಂಸ್ಥೆಯಾಗಿದೆ.
ಆ ಮೂಲಕ (NOC) ನಿರಪೇಕ್ಷಣಾ ಪತ್ರ ಲಭಿಸುವುದು ಮಾತ್ರ ನ್ಯಾಶನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್(ಎನ್‌ಬಿಎ) ಮಾನ್ಯತೆ ಪಡೆದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತ ಎಂಜಿನಿಯರ್‌ಗಳಿಗೆ ಮಾತ್ರ.
ಇದು ಶೇ.90ರಷ್ಟು ಎಂಜಿನಿಯರ್‌ಗಳ ಮೇಲೆ ನೇರಾ ಪರಿಣಾಮ ಬೀರಲಿದೆ.
ಪ್ರಸ್ತುತ ಇರುವ ಹೆಚ್ಚಿನ ಎಂಜಿನಿಯರ್‌ಗಳು 30-45 ವಯೋಮಿತಿಯವರಾಗಿದ್ದು, ಇವರು ಈ ಎನ್‌ಬಿಎ ಕಾಯ್ದೆ ಬರುವ ಮೊದಲೇ ಪದವಿ ಪಡೆದವರಾಗಿದ್ದಾರೆ.
ಮಕ್ಕಳು ಸಹಿತ ಕುಟುಂಬದೊಂದಿಗೆ ಕುವೈಟ್‌ನಲ್ಲಿರುವ ಭಾರತೀಯ ಎಂಜಿನಿಯರ್‌ಗಳ ಎಂಜಿನಿಯರ್ ಸರ್ಟಿಫಿಕೆಟ್‌ಗಳಿಗೆ ಮಾನ್ಯತೆ ಲಭಿಸದಿದ್ದಾಗ ಅವರು ಉದ್ಯೋಗ ಕಳಕೊಂಡು ಕುಟುಂಬದೊಂದಿಗೆ ಮರಳಬೇಕಾಗದ ಅಪಾಯ ಬಂದೊದಗಲಿದೆ.
ಇದು ಅರ್ಥಿಕ ಮತ್ತು ಸಾಮಾಜಿಕ ಸಮಸ್ಯೆಯನ್ನು ಉಂಟು ಮಾಡಲಿದ್ದು ದೇಶಕ್ಕೆ ವಿದೇಶಿ ವಿನಿಮಯದಲ್ಲೂ ಲಕ್ಷಾಂತರ ಡಾಲರ್ ನಷ್ಟ ಸಂಭವಿಸಲಿದೆ.
ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಭಾರತೀಯ ಎಂಜಿನಿಯರ್ಸ್‌ಗಳ ನಾನಾ ಸಂಘಟನೆಗಳು, ಕುವೈಟ್‌ನಲ್ಲಿರುವ ಎಂಜಿನಿಯರ್‌ಗಳು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಭಾರತೀಯ ರಾಯಭಾರ ಕಚೇರಿಗೆ ಮನವಿ ಸಲ್ಲಿಸಿ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಹೊಸ ಕಾನೂನಿನಿಂದ ಭಾರತೀಯ ಎಂಜಿನಿಯರ್‌ಗಳ ಮೇಲೆ ಗಂಭೀರ ಪರಿಣಾಮ ಬೀರುವುದರೊಂದಿಗೆ ನಿರ್ಬಂಧಿತ ಗಡಿಪಾರಿಗೆ ಕಾರಣವಾಗುತ್ತದೆ.
ಅದ್ದರಿಂದ ಕೂಡಲೇ ಭಾರತೀಯ ರಾಯಭಾರ ಅಧಿಕಾರಿಗಳು ಕುವೈಟ್ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ವಿದೇಶಾಂಗ ವ್ಯವಹಾರ ಸಂಸದೀಯ ಸ್ಥಾಯಿ ಸಮಿತಿ ಸದಸ್ಯ ಹಾಗೂ ಸಂಸದ ಶಶಿ ತರೂರ್ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.