LATEST NEWS
ಬ್ರಹ್ಮಾವರ – ಸಿಡಿಲಿನ ಅಬ್ಬರಕ್ಕೆ ಹೊಟೇಲ್ ಸುಟ್ಟು ಭಸ್ಮ

ಉಡುಪಿ ಜನವರಿ 6: ಉಡುಪಿ ಜಿಲ್ಲೆಯಲ್ಲಿ ಸುರಿದ ಗುಡು ಸಿಡಿಲು ಸಹಿತ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಉಡುಪಿಯ ಬ್ರಹ್ಮಾವರದಲ್ಲಿ ಮಳೆ ಜೊತೆ ಸಿಡಿಲ ಅಬ್ಬರಕ್ಕೆ ಹೋಟೆಲ್ ಒಂದು ಬೆಂಕಿಗಾಹುತಿಯಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಸಮೀಪವಿರುವ ಸಪ್ತಮಿ ಹೋಟೆಲ್ ಇಂದು ತಡ ರಾತ್ರಿ ಸಿಡಿಲಿನ ಆರ್ಭಟಕ್ಕೆ ಬೆಂಕಿಗಾಹುತಿಯಾಗಿದೆ. ಸಿಡಿಲಿನ ಹೊಡೆತಕ್ಕೆ ಹೋಟೆಲು ಸಂಪೂರ್ಣ ಭಸ್ಮವಾಗಿದ್ದು ಮಾಹಿತಿ ತಿಳಿದ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದೆ.ಅಗ್ನಿ ಶಾಮಕ ದಳದ ಸಕಾಲ ಕಾರ್ಯಾಚರಣೆಯಿಂದ ಭಾರೀ ಅನಾಹತ ತಪ್ಪಿದೆ. ಸಿಡಿಲಿನ ಆಘಾತಕ್ಕೆ ರೆಫ್ರಿಜರೇಟರ್ ನ ಕಂಪ್ರೇಸರ್ ಸಿಡಿದು ಹತ್ತಿಕೊಂಡಿದೆ ಮಳೆ ಬಂದ ಕಾರಣ ಹೋಟೆಲ್ ಬೇಗ ಬಂದ್ ಮಾಡಲಾಗಿತ್ತು ಆದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
