Connect with us

FILM

ಲೈಟ್‌ ಬಾಯ್‌ ಸಾವು- ನಿರ್ದೇಶಕ ಯೋಗರಾಜ್‌ ಭಟ್ ವಿರುದ್ಧ FIR ದಾಖಲು

ಬೆಂಗಳೂರು: ಹಲವು ಹಿಟ್ ಸಿನಿಮಾಗಳ ನಿರ್ದೇಶಕ ಯೋಗರಾಜ್ ಭಟ್ ಅವರ ವಿರುದ್ಧ ಎಫ್‌ಐಆರ್ ದಾಖಲಾದ ಬಗ್ಗೆ ವರದಿಯಾಗಿದೆ.

ಮನದ ಕಡಲು ಸಿನಿಮಾದ ಚಿತ್ರೀಕರಣದ ವೇಳೆ ಸೆ.5ರ ಗುರುವಾರ 30 ಅಡಿ ಮೇಲಿನಿಂದ ಬಿದ್ದು ಲೈಟ್ ಬಾಯ್ ಸಾವನ್ನಪ್ಪಿದ ಹಿನ್ನೆಲೆ ಕನ್ನಡ ಚಿತ್ರರಂಗದ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ಉತ್ತರ ಹೊರವಲಯದ ವಿಆರ್‌ಎಲ್ ಅರೆನಾ ಬಳಿ ಸಂಭವಿಸಿದ ಘಟನೆಯಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಶಿವರಾಜ್ (30) ಮೃತಪಟ್ಟಿದ್ದಾರೆ.

ಎರಡು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನದಲ್ಲಿ ಮುಂಗಾರು ಮಳೆ, ಗಾಳಿಪಟ ದಂತಹ ಹಿಟ್‌ ಸಿನಿಮಾಗಳನ್ನು ನೀಡಿದ್ದ ಯೋಗರಾಜ್‌ ಭಟ್ ಅವರನ್ನು ಮಾದನಾಯಕನಹಳ್ಳಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆರೋಪಿ ಸಂಖ್ಯೆ 3 ಎಂದು ನಮೂದಿಸಲಾಗಿದೆ. ‌ಮ್ಯಾನೇಜರ್ ಸುರೇಶ್ ಅವರನ್ನು ಆರೋಪಿ ಸಂಖ್ಯೆ 1 ಎಂದು ಹೆಸರು ದಾಖಲಾಗಿಸಲಾಗಿದೆ.

ಚಿತ್ರದ ಚಿತ್ರೀಕರಣದ ವೇಳೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲೈಟ್ ಬಾಯ್, ಮೃತ ಶಿವರಾಜ್ ಅವರು ತನ್ನ ಸಹೋದರನೊಂದಿಗೆ ನಗರದಲ್ಲಿ ವಾಸಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *