LATEST NEWS
ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಉತ್ತಾರಖಂಡ ಸರಕಾರ
ನವದೆಹಲಿ ಎಪ್ರಿಲ್ 30 : ಸುಪ್ರೀಂಕೋರ್ಟ್ ನಲ್ಲಿ ಪ್ರತೀ ಬಾರಿಯೂ ಛಿಮಾರಿ ಹಾಕಿಸಿಕೊಳ್ಳುತ್ತಿರುವ ಯೋಗಗುರು ಬಾಬಾರಾಮದೇವ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಆರ್ಯುವೇದ ಉತ್ಪನ್ನಗಳ ಕುರಿತು ವಿವಾದಾ ತ್ಮಕ ಜಾಹೀರಾತು ನೀಡಿದ ಎದುರಿಸುತ್ತಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಲೈಸೆನ್ಸ್ ಅನ್ನು ರದ್ದು ಮಾಡಿ ಉತ್ತರಾಖಂಡ ಸರ್ಕಾರ ನಿರ್ಧಾರ ಕೈಗೊಂಡಿದೆ.
ಈ ಕುರಿತು ಅದು ಸೋಮವಾರ ಸುಪ್ರೀಂಕೋರ್‌ಗೆ ಅಫಿಡವಿಟ್ ಸಲ್ಲಿಕೆ ಮಾಡಿದೆ. ಪತಂಜಲಿ ಸಂಸ್ಥೆಗೆ ಸೇರಿದ ದಿವ್ಯಾ ಫಾರ್ಮಸಿ ಉತ್ಪಾದಿಸುವ ‘ದೃಷ್ಟಿ ಐ ಡ್ರಾಪ್’, ‘ಸ್ವಾಸರಿ ಗೋಲ್ಡ್’, ‘ಸ್ವಾಸರಿ ವಟಿ’, ‘ಬೋನ್‌ಚೋಂ’, ‘ಸ್ವಾಸರಿ ಪ್ರವಾಹಿ’, ‘ಸ್ವಾಸರಿ ಅವಲೇಹ್’, ‘ಮುಕ್ತಾ ವಟಿ ಎಕ್‌ಸ್ಟ್ರಾ ಪವರ್’, ‘ಲಿಪಿ ಡೋಮ್ “, ‘ಮಧುಗ್ರಿಟ್’, ‘ಮಧುನಾ ಶಿನಿ ವಟಿ ಎಕ್ಷಾ ಪವರ್’, ‘ಲಿವಾಮೃತ್ ಅಡ್ವಾನ್ಸ್’, ‘ಲಿವೋ ಗ್ರಿಟ್’, ‘ಐಗ್ರಿಟ್ ಗೋಲ್ಡ್’ ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ಇತ್ತೀಚೆಗೆ ಪತಂಜಲಿ ಕ್ಷಮೆ ಕೂಡಾ ಕೇಳಿತ್ತು. ಮಂಗಳವಾರ ವಿಚಾರಣೆ ಮುಂದುವರೆಯಲಿದ್ದು, ಅದಕ್ಕೂ ಮುನ್ನ ಲೈಸೆನ್ಸ್ ರದ್ದು ಆದೇಶ ಹೊರಬಿದ್ದಿದೆ