Connect with us

DAKSHINA KANNADA

ಎರಡು ಸರ್ವಿಸ್ ಟಗ್ ದುರಂತ ಸೂಕ್ತ ತನಿಖೆಯಾಗಲಿ: ಶಾಸಕ ಡಾ.ಭರತ್ ಶೆಟ್ಟಿ

ಮಂಗಳೂರು, ಮೇ 17: ಟಗ್ ದುರಂತ ಹಾಗೂ ಕೋರಮಂಡಲ ಸರ್ವಿಸ್ ಹಡಗಿನ ದುರಂತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯಾರೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.

ರಾಜ್ಯ ಸರಕಾರ ಕರಾವಳಿಯಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಚಂಡಮಾರುತದಿಂದ ಯಾವುದೇ ಮೀನುಗಾರನ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಎರಡು ಪ್ರಕರಣಗಳು ಕಂಪನಿಗಳ ಸಮನ್ವಯದ ಕೊರತೆಯಿಂದ ಆಗಿರುವಂತೆ ಕಾಣುತ್ತಿದೆ.

ಬೃಹತ್ ಹಡಗಿನಿಂದ ತೈಲ ಖಾಲಿ ಮಾಡುವ ಪ್ರಕ್ರಿಯೆ ಮುಗಿದ ಬಳಿಕವೂ ಯಾಕೆ ಬಂದರಿನೊಳಗೆ ಟಗ್ ಬಂದಿಲ್ಲ. ಒಳಪ್ರವೇಶಿಲು ಅನುಮತಿ ಸಿಗಲು ತಡವಾಯಿತೆ,ಅಥವಾ ಬೇರೆ ಯಾವುದೇ ಕಾರಣವಿದೆಯೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇದರ ಜತೆಗೆ ಅವಧಿ ಮುಗಿದಿದ್ದರೂ ಅಂಡರ್‌ವಾಟರ್ ಸರ್ವಿಸ್ ಕಂಪನಿ ತನ್ನ ಕೋರಮಂಡಲ ಸರ್ವಿಸ್ ಹಡಗನ್ನು ಬಂದರಿನಲ್ಲಿ ಆಂಕರೇಜ್ ಮಾಡಿದ್ದು ಯಾಕೆ, ಬಳಿಕ ಚಂಡಮಾರುತದ ಸಮಯದಲ್ಲೇ ಹೊರಗೆ ಹೋದದ್ದು ಯಾಕೆ ಎಂಬುದಕ್ಕೆಲ್ಲಾ ಸೂಕ್ತ ಉತ್ತರ ಸಿಗಬೇಕಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಸಮಗ್ರ ವರದಿ ಪಡೆಯಬೇಕು ಹಾಗೂ ಸಂತ್ರಸ್ತ ಕಾರ್ಮಿಕ ಕುಟುಂಬಗಳಿಗೆ ಕಂಪನಿಗಳಿಂದ ಪರಿಹಾರ ದೊರಕಿಸಿಕೊಡಲು ಮುಂದಾಗಬೇಕು. ಪ್ರಕರಣದ ಕುರಿತು ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *