LATEST NEWS
ಮನೆಯಲ್ಲಿ ಆರಾಮಾಗಿ ತಿರುಗಾಡುತ್ತಿದ್ದ ಚಿರತೆ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ

ಮುಂಬೈ ಅಕ್ಟೋಬರ್ 07: ರಾತಿ ಸಂದರ್ಭ ಚಿರತೆಯೊಂದು ಮನೆಗೆ ನುಗ್ಗಿದ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದ್ದು, ಮನೆಯವರು ಬಂದಾಗ ಚಿರತೆ ಕೋಣೆಯೊಂದರಲ್ಲಿ ಆರಾಮಾಗಿ ಕುಳಿತಿತ್ತು.
ಕೋಯಾನಗರದಲ್ಲಿರುವ ಮನೆಗೆ ಇದಾಗಿದ್ದು, ಮನೆಯವರು ದುರ್ಗಾ ಪೂಜೆಗೆ ತೆರಳಿದ್ದ ಸಂದರ್ಭ ಚಿರತೆ ಮನೆಗೆ ಎಂಟ್ರಿಕೊಟ್ಟಿದೆ. ಮನೆಯವರು ಮನೆಯೊಳಗೆ ಕಾಲಿಟ್ಟಾಗ ಚಿರತೆ ಕೋಣೆಯೊಂದರ ಬಾಗಿಲಲ್ಲಿ ಕುಳಿತಿತ್ತು. ಕೂಡಲೇ ಮನೆಯವರು ಓಡಿಬಂದು ಮನೆಯ ಬಾಗಿಲಿಗೆ ಬೀಗ ಹಾಕಿದರು. ಈ ಸಂದರ್ಭ ಮನೆಯ ಸುತ್ತಮುತ್ತ ಜನ ಸೇರಿದ್ದು, ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಚಿರತೆ ರಕ್ಷಣೆ ಮಾಡಿದ್ದಾರೆ.
