LATEST NEWS
ಉಡುಪಿ – ಮನೆ ಅಂಗಳದಲ್ಲಿ ಆಟ ಆಡುತ್ತಿದ್ದ ನಾಯಿಯನ್ನ ಹೊತ್ತೊಯ್ದ ಚಿರತೆ
ಉಡುಪಿ ಡಿಸೆಂಬರ್ 06: ಉಡುಪಿಯಲ್ಲಿ ಚಿರತೆ ಕಾಟಕ್ಕೆ ಮನೆಯಲ್ಲಿರುವ ನಾಯಿಗಳಲ್ಲೇ ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗುತ್ತಿವೆ. ಅದೇ ರೀತಿ ಮನೆ ಅಂಗಳದಲ್ಲಿ ಆಟ ಆಡುತ್ತಿದ್ದ ನಾಯಿಯನ್ನು ಚಿರತೆ ಸಲೀಸಲಾಗಿ ಎತ್ತಿಕೊಂಡು ಹೋದ ಘಟನೆ ಎಲ್ಲೂರು ಮಾಣಿಯೂರಿನಲ್ಲಿರುವ ಮುರಲಿ ಶೆಟ್ಟಿಯವರ ಮನೆಯ ಆವರಣದಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮನೆ ಮಂದಿ ಬಾಗಿಲು ಹಾಕಿ ಮನೆಯೊಳಗೆ ಭಜನೆಯಲ್ಲಿ ನಿರತರಾಗಿದ್ದರು. ಈ ವೇಳೆ ಬೊಗಳುತ್ತಿದ್ದ ನಾಯಿ ನಾಪತ್ತೆಯಾಗಿದ್ದನ್ನು ಗಮನಿಸಿ ಸಿಸಿ ಟಿವಿ ಪರಿಶೀಲಿಸಿದಾಗ ಕೃತ್ಯ ಗಮನಕ್ಕೆ ಬಂದಿದೆ. ಪದೇ ಪದೇ ಈ ಭಾಗದಲ್ಲಿ ಚಿರತೆ ಕಾಟ ತೋರುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.