DAKSHINA KANNADA
400 ವರ್ಷಗಳ ಹಿಂದಿನ ಬ್ರಹ್ಮ ರಥದ ಕೊನೆಯ ರಥೋತ್ಸವ

400ವರ್ಷಗಳ ಹಿಂದಿನ ಬ್ರಹ್ಮ ರಥದ ಕೊನೆಯ ರಥೋತ್ಸವ
ಪುತ್ತೂರು ಡಿಸೆಂಬರ್ 13: ನಾಗ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಉತ್ಸವ ಸಂಪನ್ನಗೊಂಡಿದೆ. ಕೋಟ್ಯಾಂತರ ಭಕ್ತರ ಆರಾಧ್ಯದೈವ ಸುಬ್ರಹ್ಮಣ್ಯ ಕೊನೆಯ ಬಾರಿಗೆ 400 ವರ್ಷಗಳ ಹಿಂದಿನ ಬ್ರಹ್ಮರಥದಲ್ಲಿ ರಥಾರೂಡನಾಗಿ ಭಕ್ತರಿಗೆ ದರ್ಶನ ನೀಡಿದ್ದು ಲಕ್ಷಾಂತರ ಭಕ್ತರು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಮುಂಜಾನೆ 6.41 ರ ವೃಶ್ಚಿಕ ಲಗ್ನ ದಲ್ಲಿ ಸುಬ್ರಹ್ಮಣ್ಯ ದೇವರು ರಥಾರೂಡವಾಗಿದ್ದು ವೈಭವ ಪೂರ್ಣವಾಗಿ ತೇರು ಉತ್ಸವ ನಡೆದಿದೆ. ದೇವಸ್ಥಾನದ ಎದುರಿನ ರಥಬೀದಿಯಲ್ಲಿ ಮೊದಲು ಉಮಾಮಹೇಶ್ವರ ದೇವರ ಸಣ್ಣ ರಥ ಮುಂದೆ ಸಾಗಿದರೆ, ಅದರ ಹಿಂದೆ ಸುಬ್ರಹ್ಮಣ್ಯ ಬ್ರಹ್ಮ ರಥ ದಲ್ಲಿ ಸಾಗಿ ಅಸಂಖ್ಯಾತ ಭಕ್ತರಿಗೆ ದರ್ಶನ ನೀಡಿದ್ದಾನೆ.

400ವರ್ಷಗಳ ಹಿಂದಿನ ಬ್ರಹ್ಮ ರಥದಲ್ಲಿ ಸುಬ್ರಹ್ಮಣ್ಯ ಕೊನೆಯ ಬಾರಿಗೆ ರಥಾರೂಡವಾಗಿದ್ದು, ಮುಂದಿನ ಎಪ್ರಿಲ್ ತಿಂಗಳಿನಲ್ಲಿ ಉದ್ಯಮಿ ಮುತ್ತಪ್ಪ ರೈ ಎರಡು ಕೋಟಿ ವೆಚ್ಚದಲ್ಲಿ ನೂತನ ಬ್ರಹ್ಮರಥ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ. ನಾಡಿನ ಶ್ರೀಮಂತ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಲಕ್ಷಾಂತರ ಮಂದಿ ಭಕ್ತರು ಸುಬ್ರಹ್ಮಣ್ಯ ನ ಐತಿಹಾಸಿಕ ವಾರ್ಷಿಕ ಉತ್ಸವಕ್ಕೆ ಸಾಕ್ಷಿಯಾಗಿದ್ದು, ವೈಭವಪೂರ್ಣವಾಗಿ ಸುಬ್ರಹ್ಮಣ್ಯ ನ ಉತ್ಸವ ತೆರೆಕಂಡಿದೆ.