LATEST NEWS
ಕಾರ್ಕಳದ ಮನೆಯೊಂದರಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಪತ್ತೆ

ಕಾರ್ಕಳ , ಜನವರಿ 09: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮನೆಯೊಂದರಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ. ಮನೆಯ ಬಾತ್ರೂಂನಲ್ಲಿ ಅವಿತಿದ್ದ ಸರ್ಪವನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ.
ಬಾತ್ ರೂಮ್ ನಲ್ಲಿ ಕತ್ತಲೆ ಇದ್ದು, ಲೈಟ್ ಕೂಡ ಹಾಕಿರಲಿಲ್ಲ. ಹಾಗಾಗಿ ಅವಿತಿದ್ದ ಕಾಳಿಂಗಸರ್ಪ ಕಂಡುಬರಲಿಲ್ಲ. ಹಾವು ಬುಸುಗುಟ್ಟುವ ಶಬ್ದ ಕೇಳಿ ಅತ್ತ ಬೆಳಕು ಹಾಯಿಸಿದ್ದಾರೆ . ಈ ವೇಳೆ ಕತ್ತಲೆಯಲ್ಲಿ ಅವಿತಿದ್ದ ಕಾಳಿಂಗಸರ್ಪ ಕಂಡುಬಂದಿದೆ.

ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಲಾಯಿತು. ಅರಣ್ಯ ಇಲಾಖೆಯವರು ಉರಗತಜ್ಞ ಅಜಯ್ ಗಿರಿ ಅವರಿಗೆ ವಿಷಯ ತಿಳಿಸಿದರು ಸ್ಥಳಕ್ಕಾಗಮಿಸಿದ ಅಜಯ್ ಗಿರಿ ಅತ್ಯಂತ ನಾಜೂಕಾಗಿ ಭಾರಿಗಾತ್ರದ ಹಾವನ್ನು ಸೆರೆಹಿಡಿದರು. ಬಟ್ಟೆಯ ಚೀಲದೊಳಗೆ ಹಾವನ್ನು ಇರಿಸಲಾಯ್ತು. ಸುಮಾರು ಎಂಟು ಅಡಿ ಉದ್ದವಿದ್ದ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
Video: