Connect with us

DAKSHINA KANNADA

ಹಾಸನ ಎಡಕುಮೇರಿ-ಕಡಗರಳ್ಳಿ ಮಧ್ಯೆ ಹಳಿ ಮೇಲೆ ಭೂಕುಸಿತ, ಭಾರಿ ಮಳೆ ಮಧ್ಯೆ ಭರದಿಂದ ಸಾಗಿದ ಕಾಮಗಾರಿ..!

ಮಂಗಳೂರು :  ಹಾಸನದ  ಶಿರಾಡಿ ಘಾಟ್ ನ ಮಂಗಳೂರು-ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರಳ್ಳಿ ಮಧ್ಯೆ ಭೂಕುಸಿತ ಸಂಭವಿಸಿರುವುದರಿಂದ  ಈ ಮಾರ್ಗದಲ್ಲಿ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು  ಭಾರಿ ಮಳೆ , ಹವಾಮಾವ ವೈಪರಿತ್ಯದ ಮಧ್ಯೆ ಹಳಿ ದುರಸ್ಥಿ ಕಾರ್ಯ ಭರದಿಂದ ಸಾಗಿದೆ.

ಸುಮಾರು 750ಕ್ಕೂ ಅಧಿಕ ಕಾರ್ಮಿಕ ಅಧಿಕಾರಿ ವರ್ಗ ಕಾಮಗಾರಿ ನಡೆಸುತ್ತಿದ್ದಾರೆ. ಆದರೂ ಆಗಸ್ಟ್ 10ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಹಳಿಯ ಕೆಳಭಾಗದಲ್ಲಿ ಭಾರಿ ಆಳಕ್ಕೆ ಮಣ್ಣು ಕುಸಿದಿದ್ದು, ಹಳಿಗಳ ಜೋಡಣೆಯನ್ನು ಸದ್ಯಕ್ಕೆ ಅಸಾಧ್ಯವಾಗಿರಿಸಿದೆ. ರೈಲ್ವೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಗಲಿರುಳು ದುರಸ್ತಿ ಕಾರ್ಯ ಕೈಗೊಂಡಿದ್ದರೂ ಸುರಿಯುತ್ತಿರುವ ಜಡಿಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ.  ಈಗಗಲೇ ಹಲವು ರೈಲುಗಳು ಮಾರ್ಗ ಬದಲಾಯಿಸಿ ಸಂಚರಿಸುತ್ತಿವೆ. ಅನೇಕ  ರೈಲುಗಳ ಸಂಚಾರ ರದ್ದುಪಡಿಸಲಾಗಿದ್ದು ಮಂಗಳೂರು-ಬೆಂಗಳೂರು ನಡುವೆ ಶಿರಾಡಿ ಮೂಲಕ ರೈಲು ಸಂಚಾರ ಸದ್ಯದ ಮಟ್ಟಿಗೆ ಕಷ್ಟ ಎನಿಸಿದೆ.

ಹಳಿಯ ತಳಮಟ್ಟವನ್ನು ಗಟ್ಟಿಗೊಳಿಸ ಬೇಕಾದರೆ 20 ವ್ಯಾಗನ್ ನಷ್ಟು ದೊಡ್ಡ ಬಂಡೆಗಳು ಬೇಕಾಗುತ್ತವೆ. ಪರ್ವತಗಳಿಗೆ ಹಾಕುವಂತಹ ಗೇಬಿಯನ್ ಮೆಷ್ ಅನ್ನು ಬೇಲಿ ರೀತಿ ಹಾಕಿ, ಬಂಡೆಗಳನ್ನು ತುಂಬುತ್ತಾ ಬರಬೇಕಿದೆ. ಆದರೆ, ಗುಡ್ಡದ ಮಣ್ಣು ಮೆತ್ತಗಾಗಿರುವುದರಿಂದ, ಈ ಮೆಷ್ ಹಾಕುವುದೂ ಕಷ್ಟವಾಗಿದೆ. ಹಗಲು-ರಾತ್ರಿ ನಿರಂತರ ಕೆಲಸ ಮಾಡಿದರೂ ರೈಲು ಮಾರ್ಗವನ್ನು ಸಹಜ ಸ್ಥಿತಿಗೆ ತರುವುದಕ್ಕೆ ಇನ್ನೂ 15 ದಿನ ಬೇಕಾಗಬಹುದು ಎಂದು ಹೇಳಲಾಗಿದೆ. ಈ ಪ್ರದೇಶಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ, ದುರಸ್ತಿಗೆ ಬೇಕಾದ ಎಲ್ಲ ವಸ್ತುಗಳನ್ನು ರೈಲಿನ ವ್ಯಾಗನ್ ಮೂಲಕವೇ ತರಬೇಕಾಗುತ್ತದೆ. ಅದನ್ನು ತಂದರೂ ಕುಸಿತವಾದ ಜಾಗಕ್ಕೆ ತರಲಾಗದು. ಯಾಕೆಂದರೆ ಹಳಿಯ ಕೆಳಭಾಗದಲ್ಲಿ ಸ್ಥಿರತೆ ಇಲ್ಲದೆ ಹಳಿ ಬಾಗುವ, ಹಾನಿಗೊಳ್ಳುವ ಅಪಾಯವೂ ಇದೆ.

ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ ನೇತೃತ್ವದ ತಂಡ ಭೇಟಿ..

ಹುಬ್ಬಳ್ಳಿಯಿಂದ ವಿಶೇಷ ರೈಲಿನ ಮೂಲಕ ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ ನೇತೃತ್ವದ ಹಿರಿಯ ರೈಲ್ವೇ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಘಟನಾ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದೆ. ತಕ್ಷಣಕ್ಕೆ ಕೈಗೊಳ್ಳಬೇಕಾದ ಪರಿಹಾರಗಳನ್ನು ಸೂಚಿಸಲು ಮಾಡಬೇಕಾದ ಕೆಲಸವನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ. ಮೈಸೂರು ವಿಭಾಗದ ಯಡಕುಮಾರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸುವುದು ಪ್ರಮುಖ ಆದ್ಯತೆಯಾಗಿ ಕಾರ್ಯಪ್ರವರ್ತವಾಗಿದೆ. ಇದೇ ಸಂದರ್ಭ ಸುರಕ್ಷತೆ ಮತ್ತು ದಕ್ಷತೆಯನ್ನು ಖಚಿತಪಡಿಸುವಿಕೆಗೆ ಆದ್ಯತೆ ನೀಡಲಾಗಿದೆ. “ಮರುಸ್ಥಾಪನೆ ಕಾರ್ಯಗಳ ಸುರಕ್ಷತೆ ಮತ್ತು ಸಮಯೋಚಿತ ಪೂರ್ಣಗೊಳಿಸುವಿಕೆ ನಮ್ಮ ಪ್ರಮುಖ ಆದ್ಯತೆಗಳಾಗಿವೆ. ನೈಋತ್ಯ ರೈಲ್ವೆಯು ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ಒದಗಿಸಲು ಮೂಲಸೌಕರ್ಯವನ್ನು ನಿರ್ವಹಿಸಲು ಮತ್ತು ಸುಧಾರಿಸಲು ಬದ್ಧವಾಗಿದೆ ಎಂದು ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ ಹೇಳಿದ್ದಾರೆ.

 

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *