LATEST NEWS
ಕುಲಶೇಖರ ರೈಲ್ವೆ ಸುರಂಗ ಬಳಿ ಭೂ ಕುಸಿತ…ಮಣ್ಣಿ ತೆರವು ಕಾರ್ಯಾಚರಣೆಗೆ ಅಡ್ಡಿಯಾದ ಮಳೆ…!!
ಮಂಗಳೂರು ಜುಲೈ 17: ಮಂಗಳೂರಿನ ಕುಲಶೇಖರ್–ಪಡೀಲ್ ನಿಲ್ದಾಣಗಳ ಮಧ್ಯೆ ಭೂ ಕುಸಿತದಿಂದಾಗಿ ರೈಲ್ವೆ ಹಳಿಗಳ ಮೇಲೆ ಬಿದ್ದಿ ತಡೆಗೊಡೆ ಸಹಿತ ಭಾರಿ ಪ್ರಮಾಣದ ಮಣ್ಣನ್ನು ತೆಗೆಯುವ ಕಾರ್ಯ ಮುಂದುವರೆದಿದ್ದು, ಮಂಗಳೂರನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಣ್ಣು ತೆಗೆಯುವ ಕಾರ್ಯಕ್ಕೆ ತೊಂದರೆ ಉಂಟಾಗಿದೆ.
ಮಂಗಳೂರು ಜಂಕ್ಷನ್–ತೋಕೂರು ನಿಲ್ದಾಣಗಳ ನಡುವಿನ ಈ ಮಾರ್ಗದಲ್ಲಿ ಶುಕ್ರವಾರ ಬೆಳಿಗ್ಗೆ 10.40ರ ವೇಳೆಗೆ ಭೂಕುಸಿದ ಉಂಟಾಗಿದೆ. ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಮಣ್ಣು ಕುಸಿದಿತ್ತು. ಆ ಸಂದರ್ಭದಲ್ಲಿ ಗುಡ್ಡದ ಮಣ್ಣು ಕುಸಿಯದಂತೆ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಂದು ಭಾಗದ ತಡೆಗೋಡೆ ಸಹಿತ ಭಾರಿ ಪ್ರಮಾಣದ ಮಣ್ಣು ರೈಲು ಹಳಿಗಳ ಮೇಲೆ ಬಿದ್ದಿದೆ.
ಸ್ಥಳಕ್ಕೆ ಪಾಲಕ್ಕಾಡ್ ವಿಭಾಗದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳಿಯಲ್ಲಿ ಬಿದ್ದಿರುವ ಕಲ್ಲು– ಮಣ್ಣು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಮಣ್ಣು ತೆರವು ಮಾಡುತ್ತಿರುವಂತೆಯೇ ಮತ್ತೆ ನೀರಿನೊಂದಿಗೆ ಮಣ್ಣು ಹರಿದು ಬರುತ್ತಿದೆ. ಅಲ್ಲದೆ ಇನ್ನಷ್ಟು ಕಡೆಗಳಲ್ಲಿ ತಡೆಗೋಡೆ ಕುಸಿಯುವ ಹಂತದಲ್ಲಿದ್ದು, ಅದು ಹಳಿಗೆ ಬೀಳದಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇನ್ನು ಈ ಮಾರ್ಗವಾಗಿ ಸಂಚರಿಸುವ ರೈಲುಗಳನ್ನು ಬೇರೆ ಮಾರ್ಗದಲ್ಲಿ ಕಳುಹಿಸಲಾಗುತ್ತಿದೆ.
ಇಂದು (17.07.2021) ಈ ಕೆಳಗಿನ ರೈಲುಗಳ ಮಾರ್ಗ ಬದಲಾವಣೆಯಾಗಿದೆ
ಇಂದು ಟ್ರೈನ್ ನಂ – 06083 ತಿರುವನಂತಪುರಂ – ನಿಜಾಮುದ್ದಿನ್ ಎಕ್ಸಪ್ರೇಸ್ ರೈಲು ಮಾರ್ಗಬದಲಾವಣೆ ಮಾಡಲಾಗಿದ್ದು, ಅದು ಇರೋಡ್, ರೆನಿಗುಂಟ, ಬಾಲಾರ್ಶಾ ಮೂಲಕ ಚಲಿಸಲಿದೆ.
ಟ್ರೈನ್ ನಂ – 06346 ತಿರುವನಂತಪುರಂ – ಮುಂಬೈ- ಲೋಕಮಾನ್ಯ ತಿಲಕ್ ನೆತ್ರಾವತಿ ಎಕ್ಸಪ್ರೇಸ್ ರೈಲನ್ನು ಮಂಗಳೂರು ಜಂಕ್ಷನ್, ಪಡೀಲ್, ಹಾಸನ, ಮಡಗಾಂ ಮೂಲಕ ಚಲಿಸಲಿದೆ.