LATEST NEWS
ಮೂಡಬಿದಿರೆ ಗುಂಡ್ಯಡ್ಕದಲ್ಲಿ ಗುಡ್ಡ ಕುಸಿತ – ಪಾಲಡ್ಕ ಕಲ್ಲಮುಂಡ್ಕೂರು ಸಂಪರ್ಕ ಬಂದ್

ಮೂಡುಬಿದಿರೆ ಅಗಸ್ಟ್ 03: ಭಾರೀ ಮಳೆಯಿಂದಾಗಿ ಗುಂಡ್ಯಡ್ಕದಲ್ಲಿ ಶನಿವಾರ ನಸುಕಿನ ಜಾವ ಗುಡ್ಡ ಕುಸಿದು ಪಾಲಡ್ಕ-ಕಲ್ಲಮುಂಡ್ಕೂರು ಸಂಪರ್ಕ ರಸ್ತೆ ಬಂದ್ ಆಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ.
ರಸ್ತೆ ಮೇಲಿನ ಮಣ್ಣನ್ನು ತೆರವುಗೊಳಿಸುವ ವೇಳೆ ಮತ್ತೆ ಗುಡ್ಡ ಕುಸಿದು ಜೆಸಿಬಿಯನ್ನು ಒಂದಷ್ಟು ದೂರಕ್ಕೆ ತಳ್ಳಿದೆ. ನಂತರ ಇನ್ನೊಂದು ಜೆಸಿಬಿಯನ್ನು ತರಿಸಿ ಮೊದಲ ಜೆಸಿಬಿಯನ್ನು ಸ್ಥಳದಿಂದ ತೆರವುಗೊಳಿಸಲಾಯಿತು.

ಗುಡ್ಡ ಜರಿದ ಪರಿಣಾಮ ಹತ್ತಿರದ ಮೂರು ಮನೆಗಳಿಗೆ ಅಪಾಯ ಉಂಟಾಗಿದ್ದು ಈ ಕುಟುಂಬಗಳ ಸ್ಥಳಾಂತರಕ್ಕೆ ಪುತ್ತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮಾನಾಯಕ್ ಸೂಚಿಸಿದ್ದಾರೆ. ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ , ಕಂದಾಯ ನಿರೀಕ್ಷಕ ಮಂಜುನಾಥ್, ಅರಣ್ಯ, ಮೆಸ್ಕಾಂ ಹಾಗೂ ಅಗ್ನಿಶಾಮಕ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.