LATEST NEWS
ಬೋರ್ ವೆಲ್ ಕೊರೆಯುವ ವೇಳೆ ಭೂ ಕುಸಿತ 15 ಅಡಿ ಆಳದೊಳಗೆ ಸಿಲುಕಿದ ಯುವಕ

ಬೋರ್ ವೆಲ್ ಕೊರೆಯುವ ವೇಳೆ ಭೂ ಕುಸಿತ 15 ಅಡಿ ಆಳದೊಳಗೆ ಸಿಲುಕಿದ ಯುವಕ
ಉಡುಪಿ ಫೆಬ್ರವರಿ 16: ಬೋರ್ ವೆಲ್ ಕೊರೆಯುವ ವೇಳೆ ಭೂ ಕುಸಿತ ಉಂಟಾಗಿ 15 ಅಡಿ ಭೂಮಿಯೊಳಗೆ ಯುವಕನೋರ್ವ ಸಿಲುಕಿರುವ ಘಟನೆ ಉಡುಪಿಯ ಮರವಂತೆಯಲ್ಲಿ ನಡೆದಿದೆ.
ಭೂಮಿಯೊಳಗೆ ಸಿಲುಕಿರುವ ಯುವಕನನ್ನು ರೋಹಿತ್ ಎಂದು ಗುರುತಿಸಲಾಗಿದ್ದು, ಮರವಂತೆ ಸಮೀಪ ಬೋರ್ ವೆಲ್ ತೋಡುವ ವೇಳೆ ಸ್ಥಳದಲ್ಲಿ ರೋಹಿತ್ ನಿಂತಿದ್ದ, ಬೋರ್ ವೆಲ್ ಕೊರೆಯುತ್ತಿದ್ದಂತೆ ಬೋರ್ ವೇಲ್ ಪೈಪ್ ನ ಸುತ್ತ ಭೂಮಿ ಕುಸಿದಿದ್ದು, ರೋಹಿತ್ 15 ಅಡಿ ಭೂಮಿಯೊಳಗೆ ಕುಸಿದಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ, ವೈದ್ಯರು ಆಗಮಿಸಿದ್ದು, ರೋಹಿತ್ ಖಾರ್ವಿ ಮೇಲೆತ್ತಲು ಯತ್ನಿಸುತ್ತಿದ್ದಾರೆ.
