Connect with us

DAKSHINA KANNADA

ರಿಂಗ್ ಬಾವಿ ಕಾಮಗಾರಿ ವೇಳೆ ಕುಸಿದ ಮಣ್ಣು – ಕಾರ್ಮಿಕ ಕೂದಲೆಳೆ ಅಂತರದಲ್ಲಿ ಪಾರು

ಸುಳ್ಯ ಜೂನ್ 30 : ರಿಂಗ್ ಬಾವಿ ಸುತ್ತ ಮಣ್ಮು ತುಂಬಿಸುವ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕಾರ್ಮಿಕನೊಬ್ಬ ಮಣ್ಣಿನಡಿ ಸಿಲುಕಿದ ಘಟನೆ ಶನಿವಾರ ಸಂಜೆ ಪಂಜದಲ್ಲಿ ನಡೆಯಿತು.


ಅಡ್ಡತ್ತೋಡು ಸಮೀಪ ಮನೆಯೊಂದರ ಬಾವಿಗೆ ಹಾಕಿದ್ದ ರಿಂಗ್‌ಗೆ ಕೇರಳದ ಕಾರ್ಮಿಕರು ಮಣ್ಣು ತುಂಬುವ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರಿಂಗ್​ನ ಬದಿಯ ಮಣ್ಣು ದಿಢೀರ್ ಕೆಳಕ್ಕೆ ಕುಸಿದು ಓರ್ವ ಕಾರ್ಮಿಕನ ದೇಹ ಮಣ್ಣಿನಲ್ಲಿ ಹೂತು ಹೋಗುತ್ತಿತ್ತು. ಕುತ್ತಿಗೆಯ ಭಾಗ ಮೇಲೆ ಉಳಿದಿದ್ದರಿಂದ ತಕ್ಷಣ ಸ್ಥಳದಲ್ಲಿದ್ದವರು ಜೆಸಿಬಿ ಸಹಾಯದಿಂದ ಕಾರ್ಮಿಕನನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಗಾಯಾಳುವನ್ನು ಆಂಬ್ಯುಲೆನ್ಸ್​ ಮೂಲಕ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತಂದು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *