Connect with us

    KARNATAKA

    ಕಾರವಾರದಲ್ಲಿ ಮನೆಯವರ ಮುಂದೆಯೇ ಕುಸಿದ ಗುಡ್ಡ; ಪತಿ ಸಾವು, ಪತ್ನಿ ಪಾರು..!

    ಕಾರವಾರ : ಭಾರಿ ಮಳೆಯಿಂದ  ಮನೆಪಕಟ್ಟದ ಗುಡ್ಡ ಕುಸಿದು ಮನೆಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದರೆ, ಆತನ ಪತ್ನಿ ಪ್ರಾಣಪಪಾಯದಿಂದ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಿನ್ನರದಲ್ಲಿ ಇಂದು ( ಮಂಗಳವಾರ) ನಡೆದಿದೆ.  ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.

    ಕಿನ್ನರದ ಗ್ರಾಮದ ತಿಕರ್ಸ್ ಗುರವ (60) ಮೃತಪಟ್ಟ ವ್ಯಕ್ತಿ. ಬೆಳಗ್ಗೆ ಮನೆಯಲ್ಲಿ ಇದ್ದಾಗ ಮನೆಯ ಹಿಂಭಾಗದ ಗುಡ್ಡ ಏಕಾಏಕಿ ಕುಸಿದು ಬಿದ್ದಿದೆ. ಇದೇ ವೇಳೆ ವಿದ್ಯುತ್ ಲೈನ್ ಸಹಿತ ಬೃಹತ್ ಮರಗಳು ಮನೆ ಮೇಲೆ ಬಿದ್ದಿವೆ. ಹೆಂಡತಿ ಹಾಗೂ ಅಕ್ಕಪಕ್ಕದ ಮನೆಯವರು ಕೂಗಿ ಕರೆಯುವ ವೇಳೆಗೆ ಗಿಡ ಮರಗಳ ಸಹಿತ ಮನೆ ಮೇಲೆ ಬಿದ್ದು, ಸಂಪೂರ್ಣ ಮನೆ ಕುಸಿದು ತಿಕರ್ಸ್ ಗುರವ ಮಣ್ಣಿನಡಿ  ಸಿಲುಕಿದ್ದರು. ಅದೃಷ್ಟವಶಾತ್  ಹೆಂಡತಿ ಮನೆಯಿಂದ ಹೊರಗೆ ಇದ್ದುದರಿಂದ ಬಚಾವ್​ ಆಗಿದ್ದಾರೆ.

    ತಕ್ಷಣ ವಿಷಯ ತಿಳಿದ ಸ್ಥಳೀಯರು ಮನೆಯಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆಗೆ ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ತೆರಳಿ ನಾಲ್ಕು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹವನ್ನು ಹೊರ ತೆಗೆದಿದ್ದಾರೆ.

    ಸ್ಥಳಕ್ಕೆ ತಹಶೀಲ್ದಾರ್, ಕಾರವಾರ ಡಿವೈಎಸ್​ಪಿ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ” ಎಂದು ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply