DAKSHINA KANNADA
ತೆಂಕಿಲ ಗುಡ್ಡದಲ್ಲಿ ಹೆಚ್ಚಾಗುತ್ತಿರುವ ಭೂಮಿ ಬಿರುಕು ಆತಂಕದಲ್ಲಿ ಸ್ಥಳೀಯರು
ತೆಂಕಿಲ ಗುಡ್ಡದಲ್ಲಿ ಹೆಚ್ಚಾಗುತ್ತಿರುವ ಭೂಮಿ ಬಿರುಕು ಆತಂಕದಲ್ಲಿ ಸ್ಥಳೀಯರು
ಪುತ್ತೂರು ಅಗಸ್ಟ್ 14: ಪುತ್ತೂರು ನಗರದ ಹೊರವಲಯದ ತೆಂಕಿಲದ ಗುಡ್ಡದಲ್ಲಿ ಬಿರುಕು ಬಿಟ್ಟ ಭೂಮಿಯ ಅಂತರ ಇನ್ನಷ್ಟು ಹೆಚ್ಚಾಗಿದೆ. ಮಳೆ ಹೆಚ್ಚಾಗುತ್ತಿದ್ದಂತೆ ಬಿರುಕಿನ ಅಂತರ ಹೆಚ್ಚಾಗಲಾರಂಭಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಈ ಪ್ರದೇಶ ಅಪಾಯಕಾರಿ ಎನ್ನುವ ಭೂ ವಿಜ್ಞಾನಿಗಳ ವರದಿ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಈ ಪ್ರದೇಶದಲ್ಲಿರುವ 11 ಮನೆಗಳನ್ನು ಸ್ಥಳಾಂತರಿಸಿದೆ. ಈ ನಡುವೆ ಭೂಮಿಯು ಬಿರುಕು ಬಿಟ್ಟಿರುವ ಪ್ರದೇಶವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಿರುವ ಹಿನ್ನಲೆಯಲ್ಲಿ ಸ್ಥಳದಲ್ಲಿ ಇದೀಗ ಪೋಲೀಸ ಪಹರೆಯನ್ನು ಕೂಡ ಹಾಕಲಾಗಿದೆ.
ಅಲ್ಲದೆ ಈ ಪ್ರದೇಶದಲ್ಲಿ ಇನ್ನು ಕೆಲವು ಮನೆಗಳು ಸ್ಥಳಾಂತರವಾಗಲು ಬಾಕಿಯಿದ್ದು, ಈ ಮನೆ ಮಂದಿ ರಾತ್ರಿ ವೇಳೆಯಲ್ಲಿ ಸಂಬಂಧಿಕರ ಮನೆಯಲ್ಲಿ ತಂಗುತ್ತಿದ್ದಾರೆ. ಆದರೆ ಸಾಕು ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಾಗದ ಕಾರಣ ಅವುಗಳನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದಾರೆ.