DAKSHINA KANNADA
ಕೆವಿಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕಿತ್ತಾಟ – ಸರಕಾರದಿಂದ ಆಡಳಿತಾಧಿಕಾರಿ ನೇಮಕಕ್ಕೆ ವಿದ್ಯಾರ್ಥಿಗಳ ಆಗ್ರಹ

ಸುಳ್ಯ ಡಿಸೆಂಬರ್ 16: ಕೆವಿಜಿ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯೊಳಗಿನ ಕಿತ್ತಾಟದಿಂದಾಗಿ ಸರಿಯಾದ ರೀತಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲ ಈ ಹಿನ್ನಲೆ ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಹಿತಕ್ಕಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಗೆ ಸರಕಾರ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ಹಾಗೂ ಸಭೆ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯಿತು.
ಕೆ.ವಿ.ಜಿ. ಡೆಂಟಲ್ ಕಾಲೇಜು ಮುಂಭಾಗದಲ್ಲಿ ಸೇರಿದ ಡಾ.ರೇಣುಕಾಪ್ರಸಾದ್ ಉಸ್ತುವಾರಿಯ ಕೆ.ವಿ.ಜಿ. ಐ.ಟಿ.ಐ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು, ಕೆ.ವಿ.ಜಿ. ಡೆಂಟಲ್ ಕಾಲೇಜು ವಿದ್ಯಾರ್ಥಿಗಳು ಸೇರಿ ಮೆರವಣಿಗೆಯ ಮೂಲಕ ಸುಳ್ಯ ತಾಲೂಕು ಕಚೇರಿ ಮುಂಭಾಗಕ್ಕೆ ಬಂದು ಸೇರಿದರು. ಈ ವೇಳೆ ಮಾತನಾಡಿದ ವಿಧ್ಯಾರ್ಥಿಗಳು ಕಳೆದ 3 ತಿಂಗಳಿನಿಂದ ಕಾಲೇಜಿನಲ್ಲಿ ದೈನಂದಿನ ಕೆಲಸಗಳು ಆಗುತ್ತಿಲ್ಲ. ಕಾಲೇಜಿನಲ್ಲಿ ಆಗುತ್ತಿದ್ದ ಕಾರ್ಯಾಗಾರಗಳು, ಕನ್ನಡ ರಾಜ್ಯೋತ್ಸವ, ವಿದ್ಯಾರ್ಥಿಗಳ ಸ್ವಾಗತ ಇತ್ಯಾದಿ ಕಾರ್ಯಾಗಾರಗಳು ಆಗುತ್ತಿಲ್ಲ. ಕಂಪ್ಯೂಟರ್ ದುರಸ್ತಿ, ಸ್ಕಾಲರ್ಶಿಪ್ ಇತ್ಯಾದಿ ಸಿಗುತ್ತಿಲ್ಲ. ವಿಚಾರಿಸಿದಾಗ ಕಾಲೇಜು ಅಕೌಂಟ್ ಸೀಝ್ ಆಗಿದೆ ಎಂಬ ಮಾಹಿತಿ ಬಂದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೆಲಸಗಳು ಆಗಬೇಕು” ಎಂದು ಹೇಳಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಜಿ.ಮಂಜುನಾಥ್ ರವರು ಬಂದು ಮನವಿ ಸ್ವೀಕರಿಸಿ, ಮನವಿಯನ್ನು ಸರಕಾರಕ್ಕೆ ಸಲ್ಲಿಸುತ್ತೇನೆ ಎಂದು ಭರವಸೆ ನೀಡಿದರು.