Connect with us

    LATEST NEWS

    ಕುವೈತ್ : ಕೇರಳದಿಂದ ವಾಪಸಾದ ಕೆಲವೇ ಹೊತ್ತಿನಲ್ಲಿ ಮಲಯಾಳಿ ಕುಟುಂಬ ಬೆಂಕಿಗೆ ಬಲಿ..!

    ಕುವೈತ್‌: ಕುವೈತ್‌ನ ಅಬ್ಬಸ್ಸಿಯಾ ಎಂಬಲ್ಲಿನ ತಮ್ಮ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕೇರಳದ ಪಟ್ಟಣಂತಿಟ್ಟ ಮೂಲದ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

    ಶುಕ್ರವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಮ್ಯಾಥ್ಯೂ ಮುಝಕ್ಕಲ್‌, ಅವರ ಪತ್ನಿ ಲಿನಿ ಅಬ್ರಹಾಂ ಮತ್ತು ಮಕ್ಕಳಾದ ಐಸಾಕ್‌ ಮತ್ತು ಎರಿನ್‌ ಮೃತ ದುರ್ದೈವಿಗಳಾಗಿದ್ದಾರೆ.ಮ್ಯಾಥ್ಯೂ ಕುವೈತ್‌ನಲ್ಲಿ 15 ವರ್ಷಗಳಿಂದ ಉದ್ಯೋಗದಲ್ಲಿದ್ದರು. ಪತ್ನಿ ನರ್ಸ್‌ ಆಗಿದ್ದರು, ಮಕ್ಕಳೂ ಕುವೈತ್‌ನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ತಮ್ಮ ಊರಾದ ಕೇರಳದ ನೆಡುಂಬಸ್ಸೆರಿಯಲ್ಲಿ ಕಳೆದು ಗುರುವಾರ ರಾತ್ರಿಯಷ್ಟೇ ಕುಟುಂಬ ಕುವೈತ್‌ಗೆ ಮರಳಿತ್ತು. ಕುವೈತ್ ಮರಳಿದ ಕೆಲವೇ ಗಂಟೆಗಳಲ್ಲಿ ಕುಟುಂಬ ಅಗ್ನಿ ಅನಾಹುತಕ್ಕೆ ಬಲಿಯಾಗಿದೆ.  ಕೊಠಡಿಯಲ್ಲಿದ್ದ ಎಸಿಯಲ್ಲಿ ಉಂಟಾದ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

    ಕಳೆದ ತಿಂಗಳು, ಕುವೈತ್‌ನ ಮಂಗಾಫ್‌ನಲ್ಲಿ ಕಾರ್ಮಿಕ ವಸತಿಗೃಹದಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ 45 ಭಾರತೀಯರು ಸಾವನ್ನಪ್ಪಿದ್ದರು. ಗುರುವಾರ  ಕುವೈತ್ ಅಗ್ನಿಶಾಮಕ ಪಡೆ (ಕೆಎಫ್ಎಫ್) ಬೆಂಕಿಯನ್ನು ತಡೆಗಟ್ಟಲು ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲು ನಾಗರಿಕರಗೆ ಸೂಚಿಸಿತ್ತು.  ದೇಶದಲ್ಲಿ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ದಾಟಿದೆ ಈ ಹಿನ್ನೆಲೆ  ಎಚ್ಚರಿಕೆ ನೀಡಲಾಗಿದೆ. ಅಗ್ನಿ ಅವಘಡ ಸಂದರ್ಭ ಬೆಂಕಿಯ ಹೊದಿಕೆಗಳು, ಹೊಗೆ ಮತ್ತು ಅನಿಲ ಶೋಧಕಗಳು ಮತ್ತು ಅಗ್ನಿಶಾಮಕಗಳಂತಹ ಬೆಂಕಿ ತಡೆಗಟ್ಟುವ ಸಾಧನಗಳನ್ನು ಹೇಗೆ ಬಳಸುವುದು ಮತ್ತು ಹೇಗೆ ಬಳಸುವುದರ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೀಡುತ್ತಿದೆ. ಅದಗ್ಯೂ ಅಗ್ನಿ ಅವಗಡಗಳು ನಿರಂತರ ನಡೆಯುತ್ತಿವೆ.

    Share Information
    Advertisement
    Click to comment

    You must be logged in to post a comment Login

    Leave a Reply