LATEST NEWS
ಕುಂದಾಪುರದಲ್ಲಿ ಹಾಡುಹಗಲೇ ವಿಧ್ಯಾರ್ಥಿಗಳ ತಂಡಗಳ ನಡುವೆ ಮಾರಾಮಾರಿ

ಕುಂದಾಪುರದಲ್ಲಿ ಹಾಡುಹಗಲೇ ವಿಧ್ಯಾರ್ಥಿಗಳ ತಂಡಗಳ ನಡುವೆ ಮಾರಾಮಾರಿ
ಉಡುಪಿ ಜನವರಿ 28: ಕುಂದಾಪುರದ ಪ್ರತಿಷ್ಠಿದ ಭಂಡಾರ್ ಕಾರ್ಸ್ ಕಾಲೇಜು ವಿಧ್ಯಾರ್ಥಿಗಳ ತಂಡಗಳ ನಡುವೆ ಹಾಡು ಹಗಲೇ ಕಬ್ಬಿಣ ರಾಡ್ ಗಳಿಂದ ಮಾರಾಮಾರಿ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ವಿಧ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ವಿಧ್ಯಾರ್ಥಿಗಳನ್ನು ಭಂಡಾರ್‌ಕಾರ್ಸ್ ಕಾಲೇಜಿನ ವಿಧ್ಯಾರ್ಥಿಗಳಾದ ಮಿಥುನ್ ಹಾಗೂ ಅಕ್ಷಯ ಎಂದು ಗುರುತಿಸಲಾಗಿದ್ದು, ಇಬ್ಬರು ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಂಡಾರ್‌ಕರ್ಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಗಣೇಶ್ ಹಾಗೂ ಕಬ್ಬಿಣದ ರಾಡುಗಳನ್ನು ಹಿಡಿದ ಬೇರೆ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು, ಭಂಡಾರ್ ಕಾರ್ಸ್ ಕಾಲೇಜುನಲ್ಲಿ ಅಭ್ಯಸಿಸುತ್ತಿದ್ದ ವಿದ್ಯಾರ್ಥಿಗಳಿಗೆ ಹಾಡಹಗಲೇ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೆ ಹಳೆ ದ್ವೇಷವೇ ಕಾರಣ ಎಂದು ಹೇಳಲಾಗಿದೆ.
ಹೊಡೆದಾಟ ತಪ್ಪಿಸಲು ಹೋದ ಇತರ ಕೆಲವು ವಿದ್ಯಾರ್ಥಿಗಳೂ ಗಾಯಗೊಂಡಿದ್ದಾರೆ. ಸ್ಥಳೀಯರು ಸೇರುತ್ತಿದ್ದಂತೆಯೇ ಹಲ್ಲೆ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಸ್ಥಳಕ್ಕೆ ಧಾವಿಸಿದ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ವಿಧ್ಯಾರ್ಥಿಗಳ ಹೊಡೆದಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
VIDEO
https://youtu.be/9XXNLAghZTg