LATEST NEWS
ಕುಂದಾಪುರ: ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವೆಂಕಟರಮಣ ಪಿಯು ಕಾಲೇಜಿನ ವಿಧ್ಯಾರ್ಥಿಗಳು
ಕುಂದಾಪುರ ಫೆಬ್ರವರಿ 07 : ಹಿಜಬ್ vs ಕೇಸರಿ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತೆಲೆ ಇದ್ದು, ದಿನದಿಂದ ದಿನಕ್ಕೆ ಉಡುಪಿ ಹೊಸ ಹೊಸ ಕಾಲೇಜುಗಳಲ್ಲಿ ಈ ವಿವಾದ ಹೆಚ್ಚಾಗುತ್ತಲೇ ಇದೆ.
ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದರು. ಜೈಶ್ರೀರಾಮ್ ಘೋಷಣೆ ಕೂಗುತ್ತಾ ಕಾಲೇಜಿಗೆ ಆಗಮಿಸಿದ ವಿಧ್ಯಾರ್ಥಿಗಳು ಕ್ಯಾಂಪಸ್ ಪ್ರವೇಶಿಸಲು ಯತ್ನಿಸಿದರು. ಮುಸ್ಲಿಂ ವಿಧ್ಯಾರ್ಥಿನಿಯರು ಹಿಜಬ್ ಧರಿಸಿದರೆ ತಾವು ಕೂಡ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತೇವೆ ಎಂದು ವಿಧ್ಯಾರ್ಥಿಗಳು ಪಟ್ಟು ಹಿಡಿದರು. ಈ ವೇಳೆ ಕೇಸರಿ ಧರಿಸಿದ ವಿಧ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರು ಬೇರೆ ವಿಧ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಅಡ್ಡಿಯುಂಟು ಮಾಡದಂತೆ ಸೂಚನೆ ನೀಡಿದರು. ನಂತರ ಕೇಸರಿ ಶಾಲುಗಳನ್ನು ತೆಗೆದು ತರಗತಿ ಪ್ರವೇಶಕ್ಕೆ ಅನುಮತಿ ನೀಡಿದರು.
ಈ ಸಂದರ್ಭ , ಸರ್ಕಾರದ ಆದೇಶದ ಪ್ರಕಾರ ಕ್ಯಾಂಪಸ್ ಒಳಗೆ ಹಿಜಾಬ್ ಮತ್ತು ಕೇಸರಿ ಶಾಲುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಪ್ರಾಂಶುಪಾಲ ಗಣೇಶ್ ಸ್ಪಷ್ಟಪಡಿಸಿದ್ದು ಆ ಬಳಿಕ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ತೆಗೆದು ತರಗತಿಗಳನ್ನು ಪ್ರವೇಶಿಸಿದರು.
https://youtu.be/VB6KXV2dW24