LATEST NEWS
ಕುಂದಾಪುರ – ಮಲಮಗಳಿಗೆ ಲೈಂಗಿಕ ದೌರ್ಜನ್ಯ ಆರೋಪಿ ಅರೆಸ್ಟ್

ಕುಂದಾಪುರ, ಜುಲೈ 13: ತನ್ನ ಮಲಮಗಳ ಮೇಲೆ ಲೈಂಗಿಕ ದೌರ್ಜನ್‌ಯ ವೆಸಗುತ್ತಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೈಂದೂರಿನ ಸೊಹೇಲ್ ಎಂದು ಗುರುತಿಸಲಾಗಿದೆ.
ಸೊಹೈಲ್ ಗಂಡ ಬಿಟ್ಟು ಹೋದ ಹೊರ ರಾಜ್ಯದ ಮಹಿಳೆಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು, ಆಕೆಗೆ ಇಬ್ಬರು ಮಕ್ಕಳು ಇದ್ದರು. ಸ್ವಲ್ಪ ಸಮಯದ ನಂತರ ಸೊಹೈಲ್ ಮಹಿಳೆಯ ಮಗಳಿಗೆ ಸೊಹೇಲ್ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅದಕ್ಕಾಗಿ ಆಕೆ ಆತನಿಂದ ದೂರ ಹೋಗಿ ಬೇರೆಡೆ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದರು. ಆದರೂ ಬಿಡದ ಸೊಹೈಲ್ ಬಾಡಿಗೆ ಮನೆಯಲ್ಲಿದ್ದ ಆಕೆ ಹಾಗೂ ಅವಳ ಮಗಳನ್ನು ಆತನ ಮನೆಗೆ ಕರೆದೊಯ್ದು ಇಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿ, ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು ಎಂದು ದೂರಲಾಗಿದೆ.

ಬಿಡಿಸಲು ಬಂದ ಬಾಲಕಿಯ ತಾಯಿಗೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದನು. ಬಳಿಕ ಮಹಿಳೆ ಆರೋಪಿಯನ್ನು ದೂಡಿ ತನ್ನ ಮಗಳನ್ನು ಆತನಿಂದ ತಪ್ಪಿಸಿಕೊಂಡು ಬಂದಿದ್ದಳು. ಈ ಬಗ್ಗೆ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.