Connect with us

LATEST NEWS

ಹಿಜಬ್ ವಿವಾದ – ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿಗೆ ನಾಳೆ ರಜೆ

ಉಡುಪಿ: ಕುಂದಾಪುರದಲ್ಲಿ ಹಿಜಬ್ ವಿವಾದ ತಾರಕಕ್ಕೇರುತ್ತಿದ್ದಂತೆ ಇದೀಗ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ.


ಕುಂದಾಪುರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಬ್‌ ಮತ್ತು ಕೇಸರಿ ಶಲ್ಯ ವಿವಾದ ಹೆಚ್ಚಾದ ಹಿನ್ನಲೆ ಈ ನಿರ್ಧಾರಕ್ಕೆ ಬರಲಾಗಿದ್ದು, ಈಗಾಗಲೇ ಹಿಜಬ್ ಗಾಗಿ ಒತ್ತಾಯಿಸಿ ವಿಧ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದು, ನಾಳೆ ಮುಂದುವರೆಯುವ ಸಾಧ್ಯತೆ ಇತ್ತು, ಈ ಹಿನ್ನಲೆ ಮುಂಜಾಗೃತಾ ಕ್ರಮವಾಗಿ ಕಾಲೇಜಿಗೆ ಶನಿವಾರ ರಜೆ ಘೋಷಿಸಲಾಗಿದೆ. ಕಾಲೇಜಿನ ಪ್ರಾಂಶುಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ.


ಬೆಳಗ್ಗೆಯಿಂದ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಾಲೇಜಿನ ಗೇಟ್​ ಮುಂಭಾಗದಲ್ಲಿ ಓದುತ್ತಾ ಕೂತಿದ್ದು, ಓದಿನಲ್ಲಿ ಮಗ್ನರಾಗಿದ್ದಾರೆ. ಕೆಲ ಸಂಘಟನೆಗಳಿಂದ ಹಿಜಬ್ ​ಧಾರಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿಯರು ಗೇಟ್​ ಮುಂದೆಯೇ ಮಧ್ಯಾಹ್ನದ ಊಟ ಸೇವಿಸಿದ್ದರು. ನಂತರ ಕಾಲೇಜು ಬಿಟ್ಟ ಮೇಲೆ ಸಂಜೆ ಮನೆಗೆ ವಾಪಸ್ಸಾಗಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *