LATEST NEWS
ಕುಂದಾಪುರ – ಬೈಕ್ ಸ್ಕಿಡ್ ಇಬ್ಬರು ವಿಧ್ಯಾರ್ಥಿಗಳ ಸಾವು….!!

ಕುಂದಾಪುರ ಜುಲೈ 17: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಇಬ್ಬರು ವಿಧ್ಯಾರ್ಥಿಗಳು ಸಾವನಪ್ಪಿರುವ ಘಟನೆ ರಾಷ್ಚ್ರೀಯ ಹೆದ್ದಾರಿ 66 ರ ಕಂಬದಕೋಣೆ ಎಂಬಲ್ಲಿ ನಡೆದಿದೆ.
ಮೃತರನ್ನು ಆಂಧ್ರ ಪ್ರದೇಶದ ಆದಿತ್ಯರೆಡ್ಡಿ(18) ಮತ್ತು ತರಣ್ ಕುಮಾರ್ ರೆಡ್ಡಿ(19) ಎಂದು ಗುರುತಿಸಲಾಗಿದೆ. ಇಬ್ಬರು ಮಣಿಪಾಲದ ಖಾಸಗಿ ಕಾಲೇಜಿನ ವಿಧ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ವಿಧ್ಯಾರ್ಥಿಗಳು ಮಣಿಪಾಲದಿಂದ ಮುರ್ಡೇಶ್ವರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ ಮಧ್ಯ ಇದ್ದ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವ ಸಂದರ್ಭ ದಾರಿಯಲ್ಲೇ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.