LATEST NEWS
ಹಂಗಳೂರು – ಬೈಕ್ ಗೆ ಡಿಕ್ಕಿ ಹೊಡೆದ ಖಾಸಗಿ ಬಸ್ – ಸವಾರ ಸಾವು

ಕುಂದಾಪುರ ಜುಲೈ 12: ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಹಂಗಳೂರು ದುರ್ಗಾಂಬ ಬಸ್ ಡಿಪ್ಪೋ ಬಳಿ ನಡೆದಿದೆ.
ಮೃತರನ್ನು ಕುಂದಾಪುರ ಪುರಸಭೆಯ ಪೌರ ಕಾರ್ಮಿಕ ಸುಂದರ (39) ಎಂದು ಗುರುತಿಸಲಾಗಿದೆ. ಕೋಟೇಶ್ವರದಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಬೈಕ್ ಗೆ, ಹಂಗಳೂರು ದುರ್ಗಾಂಬ ಡಿಪ್ಪೋ ಒಳಗೆ ಹೋಗುತ್ತಿದ್ದ ವೇಳೆ ಬಸ್ ನ್ನು ಚಾಲಕ ಹಠಾತ್ತಾಗಿ ಹೆದ್ದಾರಿಯಲ್ಲಿ ನಿರ್ಲಕ್ಷತನದಿಂದ ತಿರುಗಿಸಿದಾಗ ನೇರ ಬೈಕ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕುಂದಾಪುರ ಪುರಸಭೆ ಪೌರ ಕಾರ್ಮಿಕ ಮೂಲತಃ ಬಾರ್ಕೂರು ಬಂಡಿ ಮಠದವರಾಗಿದ್ದು ಕುಂದಾಪುರದ ಮನೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
