LATEST NEWS
ಕುಂದಾಪುರ ಎಸಿ ರಶ್ಮಿ ಎಸ್ ಆರ್ ವರ್ಗಾವಣೆ – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಉಡುಪಿ ಜುಲೈ 27: ಕುಂದಾಪುರ ಉಪವಿಭಾಗದ ಎಸಿ ರಶ್ಮಿ ಎಸ್.ಆರ್ ಅವರನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ದಕ್ಷ ಅಧಿಕಾರಿಯಾಗಿದ್ದ ರಶ್ಮಿ ಎಸ್.ಆರ್ ಅವರ ವರ್ಗಾವಣೆ ವಿರುದ್ದ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಮಾಜಿ ಶಾಸಕರೊಬ್ಬರ ಒತ್ತಡದಿಂದ ದಕ್ಷ ಅಧಿಕಾರಿಯಾದ ಕುಂದಾಪುರ ಉಪವಿಭಾಗದ ಎಸಿ ರಶ್ಮಿ ಎಸ್.ಆರ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ ಅನ್ನೋ ಆರೋಪ ಮಾಡಲಾಗಿದೆ.

ಮಾಜಿ ಶಾಸಕನ ಆಪ್ತನ ಜಾಗದ ವಿಷಯದ ತಕರಾರಿಗೆ ದಕ್ಷ ಅಧಿಕಾರಿ ಸಹಕಾರ ನೀಡಿರಲಿಲ್ಲ. ಜಾಗಕ್ಕಾಗಿ ಕಾನೂನು ಮೀರಿ ತಕರಾರು ವಿಲೇವಾರಿಗೆ ಅಧಿಕಾರಿ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಕಾನೂನು ವ್ಯಾಪ್ತಿಯಲ್ಲೇ ಕೆಲಸ ಮಾಡುವುದಾಗಿ ರಶ್ಮಿ ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಲಾಗಿದೆ. ರಶ್ಮಿ ಅವರ ದಿಢೀರ್ ವರ್ಗಾವಣೆಯಿಂದ ಕುಂದಾಪುರದ ಜನ ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಎಂಎಲ್ಎ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.