Connect with us

LATEST NEWS

ಕುಂಭಕರ್ಣನ ಖಡ್ಗ ಶ್ರೀಲಂಕಾದ ಗುಹೆಯಲ್ಲಿ ಪತ್ತೆ!

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಾಮಾಯಣದಲ್ಲಿ ವಿವರಿಸಲಾದ ಶ್ರೀಲಂಕಾದ ರಾಜ ರಾವಣನ ತಮ್ಮ ಕುಂಭಕರ್ಣನ ಖಡ್ಗವನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ ಬೃಹತ್ ಖಡ್ಗವನ್ನೂ ತೋರಿಸಲಾಗಿದೆ. ಈ ವಿಡಿಯೋವನ್ನು ಜನರು ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ “ಶ್ರೀಲಂಕಾದಲ್ಲಿ ಪತ್ತೆಯಾದ ಕುಂಭಕರ್ಣನ ಖಡ್ಗ, ರಾಮಾಯಣ ಪುರಾಣವಲ್ಲ ಸತ್ಯಕತೆ ಎಂಬುದಕ್ಕೆ ಇದೇ ಸಾಕ್ಷಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಉತ್ಖನನದ ಸಮಯದಲ್ಲಿ ಕುಂಭಕರ್ಣನ ಖಡ್ಗ ಪತ್ತೆಯಾಗಿದೆ ಎಂದು ಉಲ್ಲೇಖಿಸಿರುವ ಯಾವುದೇ ಭಾರತೀಯ ಅಥವಾ ಶ್ರೀಲಂಕಾದ ಸುದ್ದಿ ವೆಬ್‌ಸೈಟ್‌ನಿಂದ ಯಾವುದೇ ವರದಿ ಕಂಡುಬಂದಿಲ್ಲ. ಈ ವೈರಲ್ ವಿಡಿಯೋದಲ್ಲಿ 4 ವಿಭಿನ್ನ ಚಿತ್ರಗಳಿವೆ.

ಭಾರತದಲ್ಲಿ ದಸರಾದಂದು ರಾವಣನನ್ನು ಸುಡುವುದು ಮತ್ತು ದೀಪಾವಳಿಯಂದು ರಾಮಲೀಲಾ ಮಾಡುವುದು ಸಾಮಾನ್ಯವಾಗಿದೆ. ಶ್ರೀಲಂಕಾದ ರಾಜ ರಾವಣನ ಕಿರಿಯ ಸಹೋದರ ಕ್ರಿಸ್ತ ಪೂರ್ವ 5000ರ ಕಾಲದ ಕುಂಭಕರ್ಣನ ಬೃಹತ್ ಖಡ್ಗ ಪತ್ತೆಯಾಗಿದೆ ಎಂದು ಹೇಳುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಕುಂಭಕರ್ಣನ ಖಡ್ಗ ಎಂದು ಹೇಳಲಾಗುತ್ತದೆ. ಕುಂಭಕರ್ಣನು ಶ್ರೀಲಂಕಾದ ರಾಜ ರಾವಣನ ತಮ್ಮನಾಗಿದ್ದ. ಅವನ ವಿವರಣೆಯು ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಕಂಡುಬರುತ್ತದೆ. ಆತ ಅತ್ಯಂತ ಬಲಶಾಲಿಯಾಗಿದ್ದ, ದೈತ್ಯ ಶರೀರಿಯಾಗಿದ್ದ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊ 4 ಸ್ಲೈಡ್‌ಗಳನ್ನು ಹೊಂದಿದ್ದು, ಅದರಲ್ಲಿ ಬೃಹತ್ ಖಡ್ಗ ನೆಲದ ಮೇಲೆ ಬಿದ್ದಿದೆ. ಇದು ಸುರಂಗದ ಒಳಭಾಗದಲ್ಲಿರುವಂತೆ ತೋರುತ್ತಿದೆ, ಅದರ ಬಳಿ ಇಬ್ಬರು ರಕ್ಷಣಾ ಗೇರ್ ಧರಿಸಿ ನಿಂತಿದ್ದಾರೆ. ಮತ್ತೊಂದು ಚಿತ್ರದಲ್ಲಿ, ಮೂವರು ಪುರುಷರು ಬೃಹತ್ ಖಡ್ಗವನ್ನು ನೋಡುತ್ತಿದ್ದಾರೆ. ಅವರ ಮುಖ ಸ್ಪಷ್ಟವಾಗಿಲ್ಲ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *