Connect with us

    LATEST NEWS

    ಕುಕ್ಕುಂದೂರು – ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಹೊಸದಾಗಿ ನಿರ್ಮಿಸಿದ ಮನೆಗೆ ಹಾನಿ

    ಉಡುಪಿ ಜುಲೈ 28: ಹೊಸದಾಗಿ ನಿರ್ಮಿಸಿದ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹಾನಿಗೊಳಗಾದ ಘಟನೆ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಡೆದಿದೆ.


    ಮೇ 12ರಂದು ಗೃಹಪ್ರವೇಶ ಆದ ಆಸಿಯಾಬಾನು ಎಂಬವರ ಮನೆಯಲ್ಲಿ  ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕಿಟ್ ಉಂಟಾಗಿದೆ.  ಮನೆಯಲ್ಲಿರುವ ವಿದ್ಯುತ್ ಉಪಕರಣಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ.


    ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಮನೆಗೆ ಈ ಅವಘಡದಿಂದ ಸುಮಾರು ಐದು ಲಕ್ಷದವರೆಗೆ ನಷ್ಟ ಉಂಟಾಗಿದೆ. ಅದಲ್ಲದೆ ಅಡುಗೆ ಮನೆಯ ಕಾಂಕ್ರೀಟ್ ಸ್ಲಾಬ್ ಸಂಪೂರ್ಣವಾಗಿ ಬಿರುಕು ಬಿಟ್ಟು ಯಾವುದೇ ಸಂದರ್ಭದಲ್ಲಿ ಕೆಳಗೆ ಬೀಳುವ ಸಾಧ್ಯತೆ ಇದೆ ಎಂದು ಮನೆಯ ಮಾಲಕಿ ಆಸಿಯಾಬಾನು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಅಗ್ನಿಶಾಮಕ ದಳದ ಠಾಣಾಧಿಕಾರಿ ಆಲ್ಬರ್ಟ್ ಮೊನಿಸ್, ಅಚ್ಯುತ ಕರ್ಕೇರಾ, ಜಯಮೂಲ್ಯ, ನಿತ್ಯಾನಂದ, ಹಾಗೂ ರವಿಚಂದ್ರ ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

    Share Information
    Advertisement
    Click to comment

    Leave a Reply

    Your email address will not be published. Required fields are marked *