DAKSHINA KANNADA
ನಿರ್ಬಂಧವಿದ್ದರೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಅನ್ಯರಾಜ್ಯದ ಭಕ್ತರು…!!

ಪುತ್ತೂರು ಜನವರಿ 08: ರಾಜ್ಯದಲ್ಲಿ ಕೊರೊನಾ ವೀಕೆಂಡ್ ಕರ್ಫೂ ಹಿನ್ನಲೆ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಎಲ್ಲಾ ಸೇವೆಗಳನ್ನು ನಿಲ್ಲಿಸಲಾಗಿದೆ. ಆದರೂ ಇಂದು ಕ್ಷೇತ್ರಕ್ಕೆ ಅನ್ಯ ರಾಜ್ಯದ ಭಕ್ತರು ವಿವಿಧ ಕಡೆಯಿಂದ ಆಗಮಿಸಿದ್ದಾರೆ.
ಕೊರೊನಾ ಹಿನ್ನಲೆ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ರಾಜ್ಯ ಸರಕಾರ ಅವಕಾಶ ನೀಡಿದೆ. ಅಲ್ಲದೆ ವಿಕೇಂಡ್ ಕರ್ಪ್ಯೂ ಸಂದರ್ಭ ದೇಶದ ಪ್ರಮುಖ ದೇವಸ್ಥಾನಗಳು ಭಕ್ತರ ಪ್ರವೇಶಕ್ಕೆ ನಿರ್ಬಂಧಗಳನ್ನು ಹೇರಿವೆ.

ಈ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅನ್ಯರಾಜ್ಯದ ಭಕ್ತರು ಇಂದು ಆಗಮಿಸಿದ್ದಾರೆ, ಆದರೆ ದೇವರ ದರ್ಶನಕ್ಕೂ ಇಂದು, ನಾಳೆ ಅವಕಾಶವಿಲ್ಲದ ಹಿನ್ನಲೆ, ಹೊರಗಿನಿಂದಲೇ ದೇವರಿಗೆ ಪ್ರಾರ್ಥಿಸಿ ಭಕ್ತರು ತೆರಳುತ್ತಿದ್ದಾರೆ.