DAKSHINA KANNADA
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಹಿನ್ನಲೆಯಲ್ಲಿ ವಿಶೇಷ ಪೂಜೆ

ಪುತ್ತೂರು ಜುಲೈ 29: ಇಂದು ನಾಡಿನೆಲ್ಲಡೆ ನಾಗರಪಂಚಮಿ ಸಂಭ್ರಮ. ಆಷಾಢ ಕಳೆದು ಶ್ರಾವಣಕ್ಕೆ ಕಾಲಿಡುತ್ತಿದ್ದಂತೆಯೇ ಮೊದಲು ಆಚರಿಸುವ ಹಬ್ಬ ನಾಗರಪಂಚಮಿ. ನಾಗರ ಪಂಚಮಿ ಎಂದರೆ ಸರ್ಪ ದೇವತೆಗಳನ್ನು ಅಥವಾ ನಾಗರಹಾವನ್ನು ಪೂಜಿಸುವ ಸಾಂಪ್ರದಾಯಿಕ ಹಿಂದೂ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸದ ಶುಕ್ಲ ಮಾಸದ ಐದನೇ ದಿನದಂದು (ಪಂಚಮಿ) ಆಚರಿಸಲಾಗುತ್ತದೆ.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಹಿನ್ನಲೆಯಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ನಾಗನ ವಿಗ್ರಹಕ್ಕೆ ತನು ಎರೆಯಲು ಮುಂಜಾನೆಯಿಂದಲೇ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ.

ಭಕ್ತರು ನಾಗನಿಗೆ ಹಾಲು ಮತ್ತು ಸೀಯಾಳ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾಗರಪಂಚಮಿ ಹಿನ್ನಲೆಯಲ್ಲಿ ನಾಗ ಮಂಟಪ ಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ನಾಗರಪಂಚವಿಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಮಳೆ ಅಬ್ಬರ ಕಡಿಮೆ ಇರುವ ಹಿನ್ನಲೆ ಯಾವುದೇ ಅಡಚಣೆ ಆಗಿಲ್ಲ