DAKSHINA KANNADA
ಕುಡುಪು ಮಾಬ್ ಲಿಂಚಿಂಗ್ ಪ್ರಕರಣದ ಕುರಿತು ನ್ಯಾಯಕ್ಕೆ ಆಗ್ರಹಿಸಿ ಕೇರಳ ಮುಖ್ಯಮಂತ್ರಿ ಭೇಟಿಯಾದ “ಜಸ್ಟಿಸ್ ಫಾರ್ ಅಶ್ರಫ್ ಯಾಕ್ಷನ್ ಕಮಿಟಿ” ಹಾಗೂ ವಯನಾಡ್ ಸಿಪಿಐಎಂ ನಾಯಕರು

ಮಂಗಳೂರು ಮೇ 21: ಕುಡುಪು ಮಾಬ್ ಲಿಂಚಿಂಗ್ ಪ್ರಕರಣದ ಕುರಿತು ನ್ಯಾಯಕ್ಕೆ ಆಗ್ರಹಿಸಿ ಜಸ್ಟಿಸ್ ಫಾರ್ ಅಶ್ರಫ್ ಯಾಕ್ಷನ್ ಕಮಿಟಿ” ಹಾಗೂ ವಯನಾಡ್ ಸಿಪಿಐಎಂ ನಾಯಕರು ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ನೀಡಿದ್ದಾರೆ.
ವಯನಾಡ್ ನಲ್ಲಿ ಸಿಪಿಐಎಂ ಮುಖಂಡರು ಹಾಗೂ ಕಮಿಟಿಯ ಜಂಟಿ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ವಿಸ್ತಾರವಾಗಿ ಪ್ರಕರಣದ ಕುರಿತು ವಿವರಿಸಿತು, ಚರ್ಚಿಸಿತು. ಕರ್ನಾಟಕ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿಗಳ ಜೊತೆಗೆ ಮಾತಾಡುವಂತೆ, ನ್ಯಾಯ ಒದಗಿಸಲು ಕಾರ್ಯಪ್ರವೃತ್ತರಾಗುವಂತೆ ವಿನಂತಿಸಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿಯೋಗಕ್ಕೆ ಸಕಾರಾತ್ಮಕ ಸ್ಪಂದನೆಯನ್ನು ನೀಡಿದರು.
ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗದಲ್ಲಿ ಮಾಜಿ ಸಚಿವ, ಹಿರಿಯ ಕಮ್ಯುನಿಸ್ಟ್ ನೇತಾರ ಪಾಲೋಳಿ ಮುಹಮ್ಮದ್ ಕುಟ್ಟಿ, ಸಿಪಿಐಎಂ ವಯನಾಡ್ ಜಿಲ್ಲಾ ನಾಯಕರುಗಳಾದ ಅಹಮ್ಮದ್ ಮಟ್ಟಿ, ಅಡ್ವಕೇಟ್ ಜಯಕೃಷ್ಣನ್, ಯಾಕ್ಷನ್ ಕಮಿಟಿಯ ನಝರ್ ಪರಪ್ಪೂರ್, ನಾಸರ್ ಕಪ್ಪನ್, ರಹೀಮ್ ಕೆ ಕೆ, ಅಬ್ದುಲ್ ಹಖ್ ಉಪಸ್ಥಿತರಿದ್ದರು.
