LATEST NEWS
ಕುದ್ರೋಳಿ ಜಾತ್ರೆಯ ಈ ‘ಮಟ್ಕಾ ಸೋಡಾ’ ಕುಡಿದ್ರೆ ನಿಮಗೆ ಗ್ಯಾರಂಟಿ..!
ದಸರಾ ವೀಕ್ಷಣೆಗೆ ಬರುವ ಜನ ಮುಗಿ ಬಿದ್ದು ಕುಡಿಯುವ ಈ ಮಟ್ಕಾ ಸೋಡಾ ಸ್ಟಾಲಿನ ಸುಚಿತ್ವ ಮತ್ತು ಅಲ್ಲಿ ಸಿಬಂದಿಯ ಆ ನಿರ್ವಹಣೆ, ಸೋಡಾದ ಮಟ್ಕಾಗಳನ್ನು ತೊಳೆಯುವ ರೀತಿ ನೋಡಿದ್ರೆ ಹೊಟ್ಟೆಯಿಂದ ವಾಂತಿ ಬಿಡಿ ನಿಮ್ಮ ಕರುಳು ಕಿತ್ತು ಬರುವುದು ಖಂಡಿತಾ.
ಮಂಗಳೂರು : ಮಂಗಳೂರು ದಸರಾ ವಿಶ್ವವಿಖ್ಯಾತವಾಗಿದೆ ಹಾಗೇನೆ ಈ ದಸರಾದ ವೈಭವ ನೋಡಲು ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಕರಾವಳಿಯ ಈ ಸುಂದರ ನಗರಕ್ಕೆ ಬರುತ್ತಿದ್ದಾರೆ.
ಬರುವ ಪ್ರವಾಸಿಗರು ಮಂಗಳೂರಿಗರ ಅತಿಥ್ಯ ಸತ್ಕಾರಗಳಿಗೆ ಮನಸೋಲುತ್ತಾರೆ. ಹೇಳಿ ಕೇಳಿ ಮಂಗಳೂರು ನಗರ ಸುಂದರ ಮತ್ತು ಸುಚಿತ್ವಕ್ಕೆ ಹೆಸರುವಾಸಿ ಕೂಡ ಹೌದು. ಆದ್ರೆ ಸುಚಿತ್ವ ಪದರ ಅರ್ಥನೇ ಗೊತ್ತಿಲ್ಲದ ಮಂಗಳೂರು ದಸರಾ ವೈಭವ ದ ಮಧ್ಯೆ ಕುದ್ರೋಳಿ ದ್ವಾರದ ಹತ್ತಿರದ ಈ ಮಟ್ಕಾ ಸೋಡಾ ತಯಾರು ಮಾಡುವ ರೀತಿ ನೋಡಿದ್ರೆ ನಿಮಗೆ ವಾಕರಿಕೆ ಬರದಿರದು, ದಸರಾ ವೀಕ್ಷಣೆಗೆ ಬರುವ ಜನ ಮುಗಿ ಬಿದ್ದು ಕುಡಿಯುವ ಈ ಮಟ್ಕಾ ಸೋಡಾ ಸ್ಟಾಲಿನ ಸುಚಿತ್ವ ಮತ್ತು ಅಲ್ಲಿ ಸಿಬಂದಿಯ ಆ ನಿರ್ವಹಣೆ, ಸೋಡಾದ ಮಟ್ಕಾಗಳನ್ನು ತೊಳೆಯುವ ರೀತಿ ನೋಡಿದ್ರೆ ಹೊಟ್ಟೆಯಿಂದ ವಾಂತಿ ಬಿಡಿ ನಿಮ್ಮ ಕರುಳು ಕಿತ್ತು ಬರುವುದು ಖಂಡಿತಾ. ಇಲ್ಲಿನ ಸ್ವಚ್ಚತೆಯ ಜವಾಬ್ದಾರಿ ವಹಿಸಿರುವ ಮಂಗಳೂರು ಪಾಲಿಕೆ, ಆರೋಗ್ಯಾಧಿಕಾರಿಗಳು ಎಲ್ಲಿ ಮಕಡೆ ಮಲಗಿದ್ದಾರೋ ಗೊತ್ತಿಲ್ಲ. ಬಡವ, ಪಾಪದವ ಒಂದು ಶಾಪ್ ಹಾಕಿದ್ರೆ ಅವನನ್ನು ಮಧ್ಯರಾತ್ರೀಲಿ ದಾಳಿ ಮಾಡಿ ಅವನನ್ನು ಹೈರಾಣಾಗಿಸಿ ಅವನ ಲೈಸನ್ನನ್ನು ರದ್ದು ಮಾಡಿ ಬಿಡುವ ಈ ಅಧಿಕಾರಿ ವರ್ಗ ರಾಜ ರೋಷವಾಗಿ ಬೀದಿಗಳಲ್ಲಿ ಮಟ್ಕಾ ಸೋಡಾದಂತಹ ಸ್ಟಾಲ್ ಗಳನ್ನು ಇಟ್ಟು ಆ ಮಲಿನ ಮಲಯುಕ್ತ ನೀರನ್ನೇ ಸಾವಿರಾರು ಜನರಿಗೆ ಕುಡಿಸುವ ಇಂತವರ ವಿರುದ್ದ ಯಾಕೆ ಕ್ರಮ ವಹಿಸುತ್ತಿಲ್ಲವಾದ್ರೆ ಇದರ ಹಿಂದಿನ ಮರ್ಮವೇನು, ಸಾಂಕ್ರಾಮಿಕ ರೋಗಗಳಿಗೆ ಹೆಸರುವಾಸಿಯಾಗಿರುವ ಮಂಗಳೂರಿನಲ್ಲಿ ಇಂತಹ ಮಟ್ಕಾ ಸೋಡಾ ಕುಡಿದ ಸಾವಿರಾರು ಜನರ ಪರಿಸ್ಥಿತಿ ಆ ದೇವರಿಗೆ ಗೊತ್ತು….!
https://www.facebook.com/reel/297671229740696/?s=single_unit&__cft__[0]=AZUCZ4GB7AtBHv3s7Tq24Qm-Rn54fj0_Ed2mGGI-r5AxR3HOWezh76WxG8zftXzYetX2PbciXIwkxnkI0lAxiDgVY36SkPDo-hmPS9noha2XHmGy0COoYRPA8vSK474oVNugPjdF6H4nXSnn8nPpo8ZgZyxL7wmhdAioi70oYNbkCY25CewHogrnWw8J_c2lrSM&__tn__=H-R