LATEST NEWS
ಉಡುಪಿ : ಕೊರೊನಾ ನಿಯಮ ಗಾಳಿಗೆ ತೂರಿ ತುಂಬಿ ತುಳುಕುತ್ತಿರುವ ಕೆಎಸ್ಆರ್ ಟಿಸಿ ಬಸ್…!!
ಉಡುಪಿ ಜೂನ್ 29: ಕೊರೊನಾ ಪ್ರಕರಣ ಇಳಿಕೆ ಹಿನ್ನಲೆ ಅನ್ಲಾಕ್ ಆಗಿರುವ ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಜಿಲ್ಲಾಧಿಕಾರಿ ಜಗದೀಶ್ ಅವರ ಎಚ್ಚರಿಕೆ ನಡುವೆಯೂ ಜಿಲ್ಲೆಯಲ್ಲಿ ಸಂಚರಿಸುತ್ತಿರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ.
ಕೊರೊನಾ ಲಾಕ್ ಡೌನ್ ಹಿನ್ನಲೆ ಸ್ತಬ್ದವಾಗಿದ್ದ ಖಾಸಗಿ ಬಸ್ ಗಳೂ ಇನ್ನೂ ಸಂಚಾರಕ್ಕೆ ಇಳಿದಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಜುಲೈ 1 ರಿಂದ ಬಸ್ ಸಂಚಾರ ಆರಂಭಸಲಾಗುವುದು ಎಂದು ಖಾಸಗಿ ಬಸ್ ಮಾಲಕರು ತಿಳಿಸಿದ್ದಾರೆ, ಈ ನಡುವೆ ಜಿಲ್ಲೆಯಲ್ಲಿ ಬೆರಳೆಣಿಕೆಯ ಸರಕಾರಿ ಬಸ್ ಇರುವುದರಿಂದ ಜನ ಸಾಮಾನ್ಯರ ಸಂಚಾರಕ್ಕೆ ಕಷ್ಟವಾಗಿದ್ದು, ಇರುವ ಬಸ್ ಗಳಲ್ಲೇ ನಿಯಮ ಮೀರಿ ಸಂಚರಿಸುತ್ತಿದ್ದಾರೆ.
ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಬಸ್ ಗಳಲ್ಲಿ ಕೇವಲ 50% ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದ್ದು ಬಸ್ ನಲ್ಲಿ ನಿಂತುಕೊಂಡು ಪ್ರಯಾಣಿಸಲು ಅವಕಾಶ ಇಲ್ಲ. ಆದರೆ ಉಡುಪಿ ಯಿಂದ ಹೆಬ್ರಿ, ಕುಂದಾಪುರ, ಮತ್ತು ಕುಂದಾಪುರದಿಂದ ಭಟ್ಕಳ ಭಾಗಕ್ಕೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ನಿಯಮ ಮೀರಿ ಜನರನ್ನು ತುಂಬಿಸಿ ಸಂಚಾರ ನಡೆಸುತ್ತಿರುವುದು ಕಂಡು ಬಂದಿದೆ. ಬಸ್ ಪುಟ್ ಬೋರ್ಡ್ ನ ಮೇಲೂ ಜನ ನಿಂತಿರುವುದು ಕಂಡು ಬಂದಿದೆ.
ಕೆಲ ತಿಂಗಳ ಹಿಂದೆ ಖಾಸಗಿ ಬಸ್ ನಲ್ಲಿ ಶೇಕಡ 50 ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದಕ್ಕೆ ವಿಧ್ಯಾರ್ಥಿನಿಯನ್ನು ರಸ್ತೆ ಮಧ್ಯೆ ಇಳಿಸಿ ಬಸ್ ನಿರ್ವಾಹಕನಿಗೆ ಜಿಲ್ಲಾಧಿಕಾರಿ ದಂಡ ವಿಧಿಸಿದ್ದರು, ಆದರೆ ಈ ಬಾರಿ ಸರಕಾರಿ ಬಸ್ ಸರಕಾರ ನಿಯಮವನ್ನು ಗಾಳಿಗೆ ತೂರಿದ್ದು, ಅಧಿಕಾರಿಗಳಿಗೆ ಕಣ್ಣಿಗೆ ಕಾಣಿಸುವುದಿಲ್ಲವಾ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬಂದಿದೆ.