LATEST NEWS
ಕಲಾವಿದನ ಕೈಯಲ್ಲಿ ರೂಪುಗೊಂಡ ಕೆಎಸ್ ಆರ್ ಟಿಸಿ ಬಸ್….!!
ಉಡುಪಿ ಸೆಪ್ಟೆಂಬರ್ 15: ಕಲಾವಿದನೊಬ್ಬ ಪೋಮ್ ಶೀಟ್ ಬಳಸಿ ತಯಾರಿಸಿದ ಕೆಎಸ್ ಆರ್ ಟಿಸಿ ಬಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಟಯರ್, ಸ್ಟೇರಿಂಗ್, ಗೇರ್, ಹೆಡ್ಲೈಟ್, ಲಾಕ್ಗಳುಳ್ಳ ಬಾಗಿಲು, ಕಿಟಕಿ, ತುರ್ತು ನಿರ್ಗಮನ ಕಿಟಕಿ, ಮಿರರ್ ಸೇರಿದಂತೆ ಎಲ್ಲವೂ ಇವೆ. ಆದರೆ ಈ ಬಸ್ನಲ್ಲಿ ಪ್ರಯಾಣ ಮಾತ್ರ ಅಸಾಧ್ಯ, ಕಾರಣ ಇದು ನಿಜ ಬಸ್ಸಲ್ಲ, ಸಣ್ಣ ಗಾತ್ರದ ಆಟಿಕೆಯ ಬಸ್.
ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದ ಕರ್ನಾಟಕ ಸಾರಿಗೆ ಸಂಸ್ಥೆಯ ಐರಾವತ ಹಾಗೂ ಕೆಎಸ್ ಆರ್ ಟಿಸಿ ಬಸ್ ತದ್ರೂಪಿ. ಇದನ್ನು ನಿರ್ಮಿಸಿದವರು ಪ್ರಶಾಂತ ಆಚಾರ್. ಹೆಮ್ಮಾಡಿ ಸಮೀಪದ ಡೈರಿ ಸರ್ಕಲ್ನಲ್ಲಿ ಅಣ್ಣನೊಂದಿಗೆ ಓಂಕಾರ್ ಶೀಟ್ ಮೆಟಲ್ ವರ್ಕ್ಸ್ ಶಾಪ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರು ಕಲಾತ್ಮಕ ವಸ್ತುಗಳನ್ನು ತಯಾರಿಸುವುದರಲ್ಲಿ ಪ್ರವೀಣರು.
ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲೇ ಇರುತ್ತಿದ್ದ ಪ್ರಶಾಂತ್ ಆಚಾರ್ಗೆ ಹೊಸತರ ಐಡಿಯಾ ಹೊಳೆತಾಗ ರೂಪುಗೊಂಡಿದ್ದು ಈ ಬಸ್ಗಳು. ಫೋಮ್ ಶೀಟ್ ತಂದು ಅದರಲ್ಲಿ ಬಸ್ನ ಬಾಡಿ ವಿನ್ಯಾಸ ತಯಾರಿಸಿ ತಮ್ಮ ಇನ್ನೋರ್ವ ಸಹೋದರ ಓಂಕಾರ್ ಕಾರ್ ಗ್ಯಾರೇಜ್ನ ಪ್ರಕಾಶ್ ಆಚಾರ್ ಅವರ ಗ್ಯಾರೇಜ್ನಲ್ಲಿ ಬಸ್ಗೆ ಪೇಟಿಂಗ್ ಮಾಡಿ ಥೇಟು ಐರಾವತ ಬಸ್ನಂತೆ ತಯಾರಿಸಿದ್ದಾರೆ.
ಬಸ್ನೊಳಗೆ ಲೈಟ್, ಹೆಡ್ಲೈಟ್, ಬ್ರೇಕ್ ಲೈಟ್ ಎಲ್ಲವೂ ಇದ್ದು ರಾತ್ರಿಯ ಹೊತ್ತು ಈ ಎಲ್ಲಾ ವ್ಯವಸ್ಥೆಗಳು ಇನ್ನಷ್ಟುಅಂದವನ್ನು ಹೆಚ್ಚಿಸಿದೆ. ಒಂದು ಬಸ್ ತಯಾರಿಕೆಗೆ ವೆಚ್ಚ ಬರೋಬ್ಬರಿ 8-10 ಸಾವಿರ ವೆಚ್ಚ ತಗುಲಿದೆ.
ಪ್ರಶಾಂತ್ಗೆ ಮೊದಲಿಂದಲೂ ಸರ್ಕಾರಿ ಬಸ್ ಮೇಲೆ ತುಂಬಾ ಅಭಿಮಾನ. ಇದೀಗ ಇನ್ನೆರಡು ಬಸ್ಗಳನ್ನು ಯಾರಿಸಲು ಮುಂದಾಗಿದ್ದಾರೆ. ಇದಕ್ಕಾಗಿಯೇ ಇದೀಗ ದಿನಕ್ಕೆ ಸ್ವಲ್ಪ ಹೊತ್ತು ಬಿಡುವು ಮಾಡಿಕೊಳ್ಳುತ್ತಿರುವ ಪ್ರಶಾಂತ್ ಆಚಾರ್ ವಾಯುವ್ಯ ಕರ್ನಾಟಕ ಸಾರಿಗೆ ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ಈ ಎರಡು ಮಾದರಿಯ ಬಸ್ಗಳನ್ನು ತಯಾರಿಸುವ ತಯಾರಿಯಲ್ಲಿ ನಿರತರಾಗಿದ್ದಾರೆ.
ಎಲ್ಲಾ ಬಸ್ಗಳನ್ನು ಸಂಗ್ರಹಿಸಿ ತಮ್ಮ ಕನಸಿನ ಕುಂದಾಪುರದ ಹೈಟೆಕ್ ಸರ್ಕಾರಿ ಬಸ್ ನಿಲ್ದಾಣವನ್ನು ರಚಿಸುವ ತಯಾರಿಯಲ್ಲಿದ್ದು, ಇನ್ನೊಂದು ವರ್ಷದೊಳಗೆ ತಮ್ಮ ಕನಸಿನ ಕುಂದಾಪುರ ಬಸ್ ನಿಲ್ದಾಣವನ್ನು ತಮ್ಮದೇ ಕಲ್ಪನೆಯಲ್ಲಿ ರಚಿಸಲಿದ್ದಾರೆ.
Facebook Comments
You may like
-
ಕುಂದಾಪುರದಲ್ಲಿ ಬೈಕ್ ಕಳ್ಳರಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ…!
-
ಮೇಲಧಿಕಾರಿಗಳ ಕಿರುಕುಳ : ಕೆಎಸ್ಆರ್ಟಿಸಿ ನಿರ್ವಾಹಕ ಆತ್ಮಹತ್ಯೆಗೆ ಯತ್ನ
-
ರಂಗಸ್ಥಳದಲ್ಲೇ ಕೊನೆಯುಸಿರೆಳೆದ ಯಕ್ಷಗಾನ ಕಲಾವಿದ
-
ಕುಂದಾಪುರ 17 ವರ್ಷದ ಬಾಲಕಿಯ ಬಾಲ್ಯವಿವಾಹ ತಡೆದ ಅಧಿಕಾರಿಗಳು
-
ಕೆಎಂಎಫ್ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಅಪಘಾತಕ್ಕೆ ಬಲಿ
-
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಮಲಶಿಲೆ ದೇಗುಲಕ್ಕೆ ಭೇಟಿ
You must be logged in to post a comment Login