DAKSHINA KANNADA
ಸುಬ್ರಹ್ಮಣ್ಯ – ಕೆಎಸ್ಆರ್ ಟಿಸಿ ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ ಸ್ಕೂಟರ್ ಸವಾರ ಸಾವು

ಸುಬ್ರಹ್ಮಣ್ಯ ಮಾರ್ಚ್ 11: ಸ್ಕೂಟರ್ ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೈಕಂಬ ಬಳಿ ಸೋಮವಾರ ನಡೆದಿದೆ.
ಬಿಳಿನೆಲೆ ಗ್ರಾಮದ ಚೇರು ನಿವಾಸಿ ದಿ.ವಿಶ್ವನಾಥ ಎಂಬುವರ ಪುತ್ರ ವಿನ್ಯಾಸ್ (23) ಮೃತಪಟ್ಟವರು. ಕಡಬ ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಕೈಕಂಬ ಕಡೆಗೆ ತೆರಳುತ್ತಿದ್ದ ವಿನ್ಯಾಸ್ ಅವರ ದ್ವಿಚಕ್ರ ವಾಹನ ಬಿಳಿನೆಲೆ ಗ್ರಾಮದ ಕೈಕಂಬ ಕೋಟೆಹೊಳೆ ಬಳಿ ಅಪಘಾತಕ್ಕೀಡಾಗಿದೆ. ಕಡಬ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿನ್ಯಾಸ್ ಅವರು ಕೂಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ತಂದೆ ಇತ್ತೀಚೆಗೆ ನಿಧನರಾಗಿದ್ದರು ಎಂದು ತಿಳಿದುಬಂದಿದೆ.
