LATEST NEWS
ಕೊಣಾಜೆ – ಸ್ಕೂಟರ್ ಮತ್ತು ಟೆಂಪೋ ನಡುವೆ ಅಪಘಾತ – ಸ್ಕೂಟರ್ ಸವಾರ ಸಾವು
ಮಂಗಳೂರು ಜನವರಿ 17: ಸ್ಕೂಟರ್ ಹಾಗೂ ಟೆಂಪೋ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಕೊಣಾಜೆ ನಡುಪದವು ಬಳಿ ಇಂದು ಸಂಭವಿಸಿದೆ. ಮೃತರನ್ನು ಕೊಣಾಜೆ ಗ್ರಾಮದ ನಡುಪದವು ಕಾಟುಕೋಡಿ ನಿವಾಸಿ ಮೊಯ್ದೀನ್ ಕುಂಞಿ ಬಾವು ಎಂಬವರ ಪುತ್ರ ಅಬೂಬಕರ್ ಸಿದ್ದೀಕ್ ರಝ್ವಿ(22) ಎಂದು ಗುರುತಿಸಲಾಗಿದೆ.
ದೇರಳಕಟ್ಟೆ ಕಡೆಯಿಂದ ತೆರಳುತ್ತಿದ್ದ ಸ್ಕೂಟರ್ ಮತ್ತು ಮುಡಿಪು ಕಡೆಯಿಂದ ತೊಕ್ಕೊಟ್ಟಿನತ್ತ ಬರುತ್ತಿದ್ದ ಏಸ್ ಟೆಂಪೊ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಭಾಗಶಃ ಟೆಂಪೊದೊಳಗೆ ನುಗ್ಗಿದ್ದು, ನಜ್ಜುಗುಜ್ಜಾಗಿದೆ. ಈ ವೇಳೆ ಟೆಂಪೋದ ಮೇಲೆ ಎಸೆಯಲ್ಪಟ್ಟ ಅಬೂಬಕರ್ ಸಿದ್ದೀಕ್ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಟೆಂಪೋ ಚಾಲಕ ಕೂಡಾ ಗಾಯಗೊಂಡಿದ್ದಾರೆ.