FILM
ಮಲೆಯಾಳಂ ಖ್ಯಾತ ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ ರಸ್ತೆ ಅಪಘಾತದಲ್ಲಿ ಸಾವು…!!

ಕೇರಳ ಜೂನ್ 05: ಮಿಮಿಕ್ರಿ ಕಲಾವಿದ ಹಾಗೂ ಸ್ಟಾರ್ ಮ್ಯಾಜಿಕ್ ಖ್ಯಾತಿಯ ಕೊಲ್ಲಂ ಸುಧಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಕೈಪಮಂಗಲದಲ್ಲಿ ಗೂಡ್ಸ್ ಕ್ಯಾರಿಯರ್‌ಗೆ ಅವರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕೊಲ್ಲಂ ಸುಧಿ ಸಾವನಪ್ಪಿದ್ದಾರೆ.
ಈ ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಮಿಮಿಕ್ರಿ ಕಲಾವಿದರಾದ ಬಿನು ಆದಿಮಲಿ , ಉಲ್ಲಾಸ್ ಮತ್ತು ಮಹೇಶ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವರದಿಯ ಪ್ರಕಾರ, ಸುಧಿ ಮತ್ತು ಇತರ ಕಲಾವಿದರು ತಮ್ಮ ಟಿವಿ ಕಾರ್ಯಕ್ರಮದ ನಂತರ ಮನೆಗೆ ಹಿಂತಿರುಗುತ್ತಿದ್ದರು. ಅಪಘಾತದ ಕೂಡಲೇ ಸುಧಿಯವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ.